ಬೆಂಗಳೂರು ಏ.12 NEWS DESK : ಖ್ಯಾತಿ ಜ್ಯೋತಿಷಿ ಎಸ್.ಕೆ.ಜೈನ್ (67) ಅವರು ಇಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಶ್ವಾಸಕೋಶದ ಸೋಂಕಿನಿಂದ ನೀರು ಶೇಖರಣೆಗೊಂಡು ದೇಹಕ್ಕೆಲ್ಲಾ ಹರಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಸುರೇಂದ್ರ ಕುಮಾರ್ ಜೈನ್ (ಎಸ್.ಕೆ.ಜೈನ್) ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ಬೆಳೆದರು. ಸುಮಾರು 40 ವರ್ಷಗಳ ಸುದೀರ್ಘ ಕಾಲ ಜ್ಯೋತಿಷಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಉದಯ ಟಿವಿಯಲ್ಲಿ ದಾಖಲೆಯ 20 ವರ್ಷಗಳ ಕಾಲ ಇವರು ನಡೆಸಿಕೊಡುತ್ತಿದ್ದ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರಗೊಂಡಿತ್ತು.
ಎಸ್.ಕೆ.ಜೈನ್ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.









