
ಸುಂಟಿಕೊಪ್ಪ ಏ.18 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡರಾಮ ದೇವಾಲಯದಲ್ಲಿ ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕೊದಂಡರಾಮ ಮಂದಿರದಲ್ಲಿ ಬೆಳಿಗ್ಗೆ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ಬೆಳ್ಳಿಯ ಕವಚವನ್ನು ಅಳವಡಿಸಿ, ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ರಾಮನಿಗೆ ಪಂಚಾಮೃತ ಅಭಿಷೇಕ, ರಾಮತಾರಕ ಹೋಮ ನಡೆದು ಮಹಾಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.
ಪೂಜಾ ಕೈಂಕಾರ್ಯವನ್ನು ದೇವಾಲಯದ ಮುಖ್ಯ ಅರ್ಚಕ ಜಯಂತ್ ಭಟ್ ಅವರ ನೇತೃತ್ವದಲ್ಲಿ
ಅರ್ಚಕರುಗಳಾದ ಗಣೇಶ್ ಉಪಾಧ್ಯಯ, ಮಂಜುನಾಥ್ ಭಟ್, ಮಂಜುನಾಥ್ ಉಡುಪ, ಗಣೇಶ್ ಭಟ್ ನೆರವೇರಿಸಿದರು.
ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ಪದಾಧಿಕಾರಿಗಳು ಗೌರಿ ಗಣೇಶೋತ್ಸವ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಬಿ.ಎಂ.ಸುರೇಶ್, ನಿಕಟಪೂರ್ವ ಕಾರ್ಯದರ್ಶಿ ಸುರೇಶ್ ಗೋಪಿ, ಮುಖಂಡರಾದ ಪಿ.ಆರ್.ಸುನಿಲ್‍ಕುಮಾರ್, ಧನುಕಾವೇರಪ್ಪ, ಶಾಂತರಾಮ್ ಕಾಮತ್, ರಾಮ ಸೇವಾ ಸಮಿತಿಯ ಅಶೋಕ್ ಶೇಟ್, ಪ್ರೀತಂ ಪ್ರಭಾಕರ್, ವಿಜಯ ಸೇರಿದಂತೆ ಮತ್ತಿತರರು ಇದ್ದರು.







