ಮಡಿಕೇರಿ ಏ.18 NEWS DESK : ಆಕಸ್ಮಿಕವಾಗಿ ಕಾಡು ಹಂದಿ ನುಗ್ಗಿದ ಪರಿಣಾಮ ಬೈಕ್ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಶೈಲಾಪುರ ಮತ್ತು ಕೊಟಗುಡ್ಡ ಗ್ರಾಮಗಳ ಮಧ್ಯ ಮದ್ರೇನಹಳ್ಳಿ ಅರಣ್ಯ ಪ್ರದೇಶದ ಬಳಿ ನಡೆದಿದೆ.
ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಟಲು ಗ್ರಾಮದ ನಿವಾಸಿ ಗ್ರಾ.ಪಂ ಸದಸ್ಯ ಕೃಷ್ಣಪ್ಪ ಮೃತ ದುರ್ದೈವಿ. ಬುಧವಾರ ರಾತ್ರಿ 9ಗಂಟೆ ಸಮಯದಲ್ಲಿ ಅಚ್ಚಮ್ಮನಹಳ್ಳಿ ಗ್ರಾಮದಿಂದ ಬೆಳ್ಳಿಬಟ್ಟಲು ಗ್ರಾಮಕ್ಕೆ ಕೃಷ್ಣಪ್ಪ ಹಾಗೂ ಪತ್ನಿ ಗುಂಡಮ್ಮ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾಡು ಹಂದಿ ಆಕಸ್ಮಿಕವಾಗಿ ನುಗ್ಗಿದೆ. ಇದರ ಪರಿಣಾಮ ದಂಪತಿ ಬೈಕ್ ಸಹಿತ ರಸ್ತೆಗೆ ಬಿದ್ದಿದ್ದಾರೆ. ಇಬ್ಬರನ್ನು ಪಾವಗಡ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಕೃಷ್ಣಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.










