ಮಡಿಕೇರಿ ಏ.18 NEWS DESK : ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಕೊಡಗು ಪ್ರಾದೇಶಿಕ ಆಡಳಿತಾಧಿಕಾರಿಯಾಗಿ 7ನೆ ಹೊಸಕೋಟೆಯ ಸ್ಟೇನಿ ಜೋಸೆಫ್ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ತಿಳಿಸಿದ್ದಾರೆ.
ಸುಂಟಿಕೊಪ್ಪದ 7ನೇ ಹೊಸಕೋಟೆಯಲ್ಲಿ ಟ್ರಸ್ಟ್ ನ ಕಚೇರಿಯಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಮಾನ್ಯತೆ ಪಡೆದಿರುವ ಉದ್ದೇಶಗಳನ್ನು ಮೊದಲ ಹಂತದಲ್ಲಿ ಕೊಡಗಿನಲ್ಲಿ ಪ್ರಾರಂಭಿಸಲು ಟ್ರಸ್ಟ್ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಟೇನಿ ಜೋಸೆಫ್ ಅವರನ್ನು ನೇಮಕ ಮಾಡಿರುವುದಾಗಿ ಹೇಳಿದರು.
ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಟೇನಿ ಜೋಸೆಫ್ ಅವರು ನಮ್ಮ ಸಂಸ್ಥೆಯ ಮೂಲಕ ಬಡವರಿಗೆ ಸಹಾಯ ಮಾಡಲು ಮತ್ತು ಮಾನವೀಯತೆಯ ಮೌಲ್ಯಗಳನ್ನು ಎಲ್ಲರಿಗೂ ತಿಳಿಸಲು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಇಲ್ಲಿಗೆ ಮರಳಿದ್ದಾರೆ. ಟ್ರಸ್ಟ್ ನ ಆಡಳಿತಾಧಿಕಾರಿ ಜವಾಬ್ದಾರಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದಾರೆ ಎಂದರು.
ಕ್ರಿಮಿನಲ್ ಚಟುವಟಿಕೆ ಅಥವಾ ಮೊಕದ್ದಮೆ ಇಲ್ಲದೆ ಇರುವ ಯಾವುದೇ ಪ್ರದೇಶದ ವ್ಯಕ್ತಿಗಳು ನಮ್ಮ ಸಂಸ್ಥೆಗೆ ಸೇರಿಕೊಳ್ಳಬಹುದಾಗಿದೆ. ಆದರೆ ಮಾನವೀಯತೆಯ ಗುಣ ಇರಬೇಕು ಮತ್ತು ಅದರ ಮೌಲ್ಯಗಳನ್ನು ತಿಳಿದಿರಬೇಕು. ಸಂಸ್ಥೆ ಒಂದು ಕುಟುಂಬದ ಆಸ್ತಿಯಲ್ಲ, ಎಲ್ಲರೂ ಕೈಜೋಡಿಸಿ ಒಗ್ಗಟ್ಟನಿಂದ ಮುನ್ನಡೆಯುವ ಉದ್ದೇಶವನ್ನು ಹೊಂದಿದೆ.
ಮಾನವೀಯತೆ ಎಂಬ ಪದವೇ ಒಂದು ಅದ್ಭುತ ಶಕ್ತಿಯಾಗಿದೆ. ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಗೆ ಸೇರುವ ಎಲ್ಲಾ ಸ್ವಯಂ ಸೇವಾ ಸದಸ್ಯರು ಹಾಗೂ ಮಾನವ ಸಂಪನ್ಮೂಲದ ನಾಯಕರುಗಳಿಂದಲೇ ಮಾನವೀಯತೆಯ ಮೌಲ್ಯಗಳು ಪ್ರಾರಂಭವಾಗಬೇಕು. ನಾವು ಟ್ರಸ್ಟ್ ಮೂಲಕ ವೇದಿಕೆಯನ್ನಷ್ಟೇ ಒದಗಿಸಿದ್ದೇವೆ. ಸ್ವಯಂ ಪ್ರೇರಿತರಾಗಿ ಸದಸ್ಯರಾಗಿ ಬಡವರ ಸೇವೆ ಮಾಡಿ ಎಂದು ಶಿವಕುಮಾರ್ ಕರೆ ನೀಡಿದರು.
ಸದಸ್ಯತ್ವ ಹೊಂದುವವರು ಈ ಮೊ.ಸಂ. 9481332181, 9739973947 ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸಂಸ್ಥೆಯ ಟ್ರಸ್ಟಿಗಳಾದ 7 ನೇ ಹೊಸಕೋಟೆಯ ಸೌಮ್ಯಶ್ರೀ, ಕಾನೂನು ಘಟಕದ ಮುಖ್ಯಸ್ಥೆ, ವಕೀಲರಾದ ಮೊನಾಲಿಸಾ ಶಿವಕುಮಾರ್ ಹಾಗೂ ಪುರುಷೋತ್ತಮ ಪಿ.ಜೆ ಉಪಸ್ಥಿತರಿದ್ದು ಸ್ಟೇನಿ ಜೋಸೆಫ್ ಅವರಿಗೆ ಶುಭ ಹಾರೈಸಿದರು.