ಮಡಿಕೇರಿ ಏ.18 NEWS DESK : ಕೊಡವ ಜಾನಪದ ಹೇಳುವ ಸ್ಪರ್ಧೆಯಲ್ಲಿ ಬಾದುಮಂಡ ಬೀನಕಾಳಯ್ಯ ಪ್ರಥಮ, ಕೊಟ್ಟಂಗಡ ಕವಿತ ವಾಸುದೇವ ದ್ವಿತೀಯ ಮತ್ತು ಮಚ್ಚುರ ಶಾರದ ಅಪ್ಪಯ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕೊಡವಾಮೆರ ಕೊಂಡಾಟ ಸಂಘಟನೆ ಕೊಡವ ಜಾನಪದ ಕಥೆ ಹೇಳುವ ಸ್ಪರ್ಧೆಯನ್ನು ಅಂತರ್ಜಾಲದಲ್ಲಿ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ನಾನಾ ಭಾಗಗಳಿಂದ ಒಟ್ಟು 17 ಸ್ಪರ್ಧಿಗಳು ಭಾಗವಹಿಸಿ ತಮ್ಮ ಜಾನಪದ ಪ್ರೌಢಿಮೆ ಮೆರೆದರು.
ಕೊಡವಾಮೆರ ಕೊಂಡಾಟ ಸಂಘಟನೆ ಸಂಸ್ಥಾಪಕರೂ ಆದ ಚಾಮೆರ ದಿನೇಶ್ ಬೆಳ್ಳಪ ಪರಿಕಲ್ಪನೆಯಲ್ಲಿ ಆಯೋಜನೆಗೊಂಡ ಈ ಸ್ಪರ್ಧೆಯ ಬಹುಮಾನ ದಾನಿಗಳಾಗಿ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಶನ್ ನಾಣಯ್ಯ ಅವರು ನೀಡಿದರೆ, ಹಿನ್ನೆಲೆ ಚಿತ್ರವನ್ನು ಸುಪ್ರಸಿದ್ದ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ ರಚಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಜಾನಪದ ತಜ್ಞರಾದ ಬಾಚರಣಿಯಂಡ ಅಪ್ಪಣ್ಣ, ರಾಣು ಅಪಣ್ಣ ಹಾಗೂ ಅಲ್ಲಾರಂಡ ವಿಠಲ್ ನಂಜಪ್ಪ ಅವರು ನಿರ್ವಹಿಸಿದರು. ಸರ್ಧಾ ಸಂಚಾಲಕರಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಸಹ ಕಾರ್ಯದರ್ಶಿ ಮಲ್ಲಂಡ ದರ್ಶನ್ ಮುತ್ತಪ್ಪ ಕಾರ್ಯ ನಿರ್ವಹಿಸಿದರು.
ಸ್ಪರ್ಧೆಯಲ್ಲಿ, ಮಾಳೇಟಿರ ಸೀತಮ್ಮ ವಿವೇಕ್, ಬೊಟೋಳಂಡ ನಿವ್ಯ ದೇವಯ್ಯ, ನೂರೇರ ಸರಿತ ಉತ್ತಯ್ಯ, ಮಚ್ಚುರ ಮೀನಲ್ ಸುಬ್ಬಯ್ಯ, ನೂರೇರ ಲಾಜ್ ಮುತ್ತಮ್ಮ ಪರಿಯಂಡ ಯಶೋದ, ಉಡುವರ ವಿಠಲ್ ತಿಮ್ಮಯ್ಯ, ಅಣ್ಣಳಮಾಡ ಕಾಂತಿ ಚೊಂದಮ್ಮ, ಬಾದುಮಂಡ ಬೀನ ಕಾಳಯ್ಯ, ಉಡುವೇರ ರೇಖಾ ರಘು, ಕೊಟ್ಟಂಗಡ ಕವಿತ ವಾಸುದೇವ, ಮುಕ್ಕಾಟರ ಯಶೋದ ಪೂಣಚ್ಚ ಪಂದ್ಯಂಡ ರೇಣುಕಾ ಸೋಮಯ್ಯ, ಮೇಲತಂಡ ಉಷಾ ಪ್ರತಿಮ, ಮಚ್ಚುರ ಶಾರದ ಅಪ್ಪಯ್ಯ, ಮೊಣ್ಣಂಡ ಶೋಬಾ ಸುಬ್ಬಯ್ಯ, ನಾಪಂಡ ಚಿಣ್ಣಪ್ಪ ಭಾಗವಹಿಸಿದರು.
ವಿಜೇತರಿಗೆ ನಗದು ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲಾ ಕಥೆಗಾರರಿಗೂ ಸ್ಮರಣಿಕೆಗಳನ್ನು ನೀಡಲಿದ್ದು, ಬಹುಮಾನಗಳನ್ನು ಸಂಘಟನೆಯ ಮುಂದಿನ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
Breaking News
- *ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮುಂಖಡರ ಸಭೆ*
- *ಸುಂಟಿಕೊಪ್ಪ : ಆರೋಗ್ಯ ಸಮಸ್ಯೆಗೆ ಫುಟ್ ಪಲ್ಸ್ ಥೆರಪಿ ರಾಮಬಾಣ : ರತ್ನಾಕರ ಶೆಟ್ಟಿ*
- *ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಬೆಂಚ್-ಡೆಸ್ಕ್ ಕೊಡುಗೆ*
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*