


ಮಡಿಕೇರಿ ಮೇ 2 NEWS DESK : ಭಾಗಮಂಡಲದ ಕೆವಿಜಿ ಐಟಿಐ 2024- 26 ನೇ ಶೈಕ್ಷಣಿಕ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ವೇತನ ಅನುದಾನ ಕೊಳಪಟ್ಟ ಈ ತರಬೇತಿ ಸಂಸ್ಥೆಯಲ್ಲಿ ಮೆಕ್ಯಾನಿಕ್ ಮೋಟಾರ್ ವೆಹಿಕಲ್( ಎಂ.ಎಂ.ವಿ), ಎಲೆಕ್ಟ್ರಾನಿಕ್ ಮೆಕಾನಿಕ್ ಮತ್ತು ಎಲೆಕ್ಟ್ರಿಕಲ್ ವೃತ್ತಿ ವಿಭಾಗಗಳಿದ್ದು, ಆಯ್ಕೆಯು ಸರ್ಕಾರದ ನಿಯಮದ ಅನುಸಾರವಾಗಿ ನಡೆಯಲಿದೆ. ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಪಡೆಯುತ್ತಿರುವಂತ ಈ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನದ ಆಯ್ಕೆ, ವಾಹನ ಕಲಿಕೆ ತರಬೇತಿ, ಪ್ರಾಯೋಗಿಕ ತರಬೇತಿ, ಹಿಂದುಳಿದ ವರ್ಗಗಳ ಹಾಸ್ಟೆಲ್ ವ್ಯವಸ್ಥೆ ಇನ್ನಿತರ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು -9900902141 ಸಂಪರ್ಕಿಸಬಹುದಾಗಿದೆ.











