
ಮಡಿಕೇರಿ ಮೇ 2 NEWS DESK : ಕೊಡಗು ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರ ಮಡಿಕೇರಿಯ ಸಮೀಪ ಮೇಕೇರಿ ಮಸೀದಿಯ ಮಖಾಂ ಉರೂಸ್ ಕಾರ್ಯಕ್ರಮ ಮೇ 3 ರಿಂದ 7 ರವರೆಗೆ ನಡೆಯಲಿದೆ.
ಮೇ 3ರ ಶುಕ್ರವಾರ ಜನಾಬ್ ಸಯ್ಯದ್ ಜಂಬ್ರುದ್ದೀನ್ ನೇತೃತ್ವದಲ್ಲಿ ಜುಮಾ ನಮಾಜಿನ ನಂತರ ಧ್ವಜಾರೋಹಣ ನೆರವೇರಲಿದೆ. ಮಧ್ಯಾಹ್ನ 2 ಗಂಟೆಗೆ ಮಖಾಂ ಝಿಯಾರತ್, ರಾತ್ರಿ 8 ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಮೇ 4ರ ಶನಿವಾರ ರಾತ್ರಿ 8 ಗಂಟೆಗೆ ಧಾರ್ಮಿಕ ಉಪನ್ಯಾಸ, ಮೇ 5ರ ಭಾನುವಾರ ಮಗ್ರಿಬ್ ನಮಾಜಿನ ನಂತರ ಮಖಾಂ ಅಲಂಕಾರವಿರುತ್ತದೆ. ಮೇ 6ರ ಸೋಮವಾರ ಜೊಹರ್ ನಮಾಜಿನ ನಂತರ ಮೌಲೂದ್ ಪಾರಾಯಣ, 2.30 ಕ್ಕೆ ಸಂದಲ್ ಮೆರವಣಿಗೆ ಹಾಗೂ ಸಂಜೆ 4 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೇಕೇರಿಯ ಕಿಜರ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ರಹೀಮ್ ತಿಳಿಸಿದ್ದಾರೆ.







