
ಮಡಿಕೇರಿ ಮೇ 2 NEWS DESK : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಮೇ 3 ರಂದು ಮಾಸಿಕ ದುರ್ಗಾಪೂಜೆ ನಡೆಯಲಿದೆ.
ಅಂದು ಸಂಜೆ 7 ಗಂಟೆಗೆ ನಡೆಯಲಿರುವ ದುರ್ಗಾಪೂಜೆಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ತೀರ್ಥ ಪ್ರಸಾದ ಸ್ವೀಕರಿಸುವಂತೆ ದೇವಾಲಯದ ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪೂಜಾ ಸೇವೆಯನ್ನು ಮಾಡಿಸುವ ಭಕ್ತಾದಿಗಳು ಸಂಜೆ 6.30 ಕ್ಕೆ ಹಾಜರಿದ್ದು, ಸಂಕಲ್ಪ ಮಾಡಿಸುವಂತೆ ಕೋರಿದೆ.








