
ಸಿದ್ದಾಪುರ ಮೇ 2 NEWS DESK : ಮನೆಯ ಆವರಣದ ಕೋಳಿ ಗೂಡಿನಲ್ಲಿದ್ದ ಭಾರೀ ಗಾತ್ರದ ನಾಗರ ಹಾವೊಂದನ್ನು ರಕ್ಷಿಸಿರುವ ಘಟನೆ ಪೊನ್ನಂಪೇಟೆ ಸಮೀಪದ ಚಿಕ್ಕ ಮಂಡೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಂಡೂರು ಗ್ರಾಮದ ಕಳ್ಳಿಚಂಡ ಶ್ಯಾಂ ಜಗದೀಶ್ ಎಂಬವರ ಮನೆಯ ಕೋಳಿಗೂಡಿನೊಳಗೆ ನಾಗರಹಾವೊಂದು ಸೇರಿಕೊಂಡು ಅಲ್ಲಿದ್ದ ಆರು ಕೋಳಿಮೊಟ್ಟೆಯನ್ನು ನುಂಗಿ ಹಾಕಿತ್ತು. ಇದನ್ನು ಗಮನಿಸಿ ಆತಂಕಗೊಂಡ ಮನೆ ಮಂದಿ ಸಿದ್ದಾಪುರದ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಸುರೇಶ್ ಮತ್ತು ಆರ್‌ಆರ್‌ಟಿ ವಿನೋದ್ ಅವರು ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.









