
ಮಡಿಕೇರಿ ಮೇ 2 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ದಿನದ ಮೊದಲ ಪಂದ್ಯದಲ್ಲಿ ರಾಯಲ್ ಟೈಗರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿ ಪೂರ್ಣ ಅಂಕಗಳನ್ನು ಪಡೆದುಕೊಂಡಿತು.
ರಾಯಲ್ ಟೈಗರ್ಸ್ ತಂಡ 7 ವಿಕೆಟ್‍ಗಳ ಅಂತರದಿಂದ ಎದುರಾಳಿ ಟೀಂ ವೈಲ್ಡ್‍ಫ್ಲಾರ್ ತಂಡವನ್ನು ಪರಾಭವಗೊಳಿಸಿತು. ಮೊಲು ಬ್ಯಾಟಿಂಗ್ ಮಾಡಿದ ಟೀಂ ವೈಲ್ಡ್ ಫ್ಲಾರ್ ತಂಡ ನಿಗದಿತ ಇಪ್ಪತ್ತು ಓವರ್‍ಗಳಲ್ಲಿ 18 ಓವರ್‍ಗಳಲ್ಲೆ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 131 ರನ್‍ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ರಾಯಲ್ ಟೈಗರ್ಸ್ ತಂಡ 11.2 ಓವರ್‍ಗಳಲ್ಲೆ 132 ರನ್‍ಗಳನ್ನು ಗಳಿಸುವ ಮೂಲಕ ಸುಲಭ ಗೆಲುವನ್ನು ಸಾಧಿಸಿತು.
ವಿಜೇತ ರಾಯಲ್ ಟೈಗರ್ಸ್ ತಂಡದ ಅಪ್ಪಯ್ಯ ಅವರು 23 ರನ್ ನೀಡಿ ಎರುರಾಳಿ ವೈಲ್ಡ್ ಫ್ಲಾರ್ ತಂಡದ ರನ್ ಓಟಕ್ಕೆ ಕಡಿವಾಣ ಹಾಕಿದ್ದಲ್ಲದೆ, ಬ್ಯಾಟಿಂಗ್‍ನಲ್ಲಿ 12 ಎಸೆತಕ್ಕೆ ಮಿಂಚಿನ 17 ರನ್ ಕಲೆ ಹಾಕಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.








