ಸುಂಟಿಕೊಪ್ಪ ಮೇ 4 NEWS DESK : ಸುಂಟಿಕೊಪ್ಪ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ 2024-25ನೇ ಸಾಲಿನ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ.ಸುನೀಲ್ ಕುಮಾರ್(ಸ್ವಾಗತ್) ನೇಮಕಗೊಂಡಿದ್ದಾರೆ.
ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ವೃಕ್ಷೋದ್ಭವ ಗಣಪತಿ ದೇವಸ್ಥಾನದ ಆವರಣದಲ್ಲಿ ರಮೇಶ್ ಶೇಟ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಪುಳಂಜನ ಕುಶಾಲಪ್ಪ, ಸಹಕಾರ್ಯದರ್ಶಿಯಾಗಿ ಶಿವರಾಮನ್,ಸಂಘಟನಾ ಕಾರ್ಯದರ್ಶಿಯಾಗಿ ನಿಖಿಲ್ ಹರೀಶ್, ಖಜಾಂಜಿಯಾಗಿ ಬಿ.ಎಸ್.ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರುಗಾಳಗಿ ಎ.ಶ್ರೀಧರ್ಕುಮಾರ್, ಮಹೇಶ್ ರೈ, ದಿವಾಕರ್ ಪೂಜಾರಿ, ದಿವಾಕರ್ ರೈ, ಕೆ..ಎನ್.ಪವಿ,ಬಿ.ಎಂ.ಸುರೇಶ್,ಸುರೇಶ್ಗೋಪಿ, ಲೋಕೇಶ್(ಲೋಕಿ), ಮಣಿಕಂಠ (ಮುನಿಯ),ಸುರೇಶ್ ಚಂದು,ಕಿಶೋರ್, ಬಿ.ಆರ್.ಸತೀಶ್, ವಿ.ಕೆ.ರಾಜ ಇವರುಗಳನ್ನು ದೇವಸ್ಥಾನದ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೇಮಕ ಮಾಡಲಾಯಿತು.
ಈ ಸಂದರ್ಭ ಟ್ರಸ್ಟಿ ಕೆ.ಸುರೇಶ್ ಕುಮಾರ್, ಬಿ.ಎಸ್.ಸದಾಶಿವ ರೈ, ಮಾಜಿ ಅಧ್ಯಕ್ಷ ರಮೇಶ್ ಶೇಟ್ ಉಪಸ್ಥಿತರಿದ್ದರು.
ದೇವಸ್ಥಾನ ಟ್ರಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಲೋಕೇಶ್ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.