
ಕಡಂಗ ಮೇ 4 NEWS DESK : ಕಡಂಗ ಬದ್ರಿಯಾ ಮಸೀದಿಯ ಅಧಿನದಲ್ಲಿ ನೂತನವಾಗಿ ಆರಂಭಗೊಂಡ ದರ್ಸ್ ಹಾಗೂ ವಾರ್ಷಿಕ ಬದರ್ ಮೌಲೀದ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕೂರತು ಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್ ಉದ್ಘಾಟಿಸಿ, ದರ್ಸ್ ನ ಮಹತ್ವ ಕುರಿತು ಮಾತನಾಡಿದರು. ನಂತರ ದುಆ ಆಶೀರ್ವಚನ ನೀಡಿದರು.
ಬದ್ರಿಯಾ ಮಸೀದಿಯ ಅಧ್ಯಕ್ಷ ಕೆ.ಇ.ಉಸ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂರ್ಗ್ ಜಮಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಬದ್ರಿಯಾ ಮಸೀದಿಯ ಮುದರಿಸ್ ಅಬ್ದುಲ್ ಸತ್ತಾರ್ ಸಖಾಫಿ, ನಾಪೋಕ್ಲು ಮಸೀದಿಯ ಮುದರಿಸ್ ಅಶ್ರಫ್ ಹಸ್ಸನಿ, ಮೊಯದ್ದಿನ್ ಮಸೀದಿಯ ಅಧ್ಯಕ್ಷ ಅಬ್ದುಲ್ಲ, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಬದ್ರಿಯಾ ಮಸೀದಿಯ ಕೋಶಾಧಿಕಾರಿ ಸಿ.ಎ.ರಜಾಕ್, ಉಪಾಧ್ಯಕ್ಷರಾದ ರಝಕ್, ರಶೀದ್, ಸಹದ್, ನೌಫಲ್, ಹಾಸಿಮ್, ಸುಹೈಲ್, ಕರೀಂ, ಅರ್ಷಾದ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಮತಿತ್ತರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ರಾಶೀದ್ ಸ್ವಾಗತಿಸಿ, ವಂದಿಸಿದರು.
ವರದಿ : ನೌಫಲ್


































