Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರ ಕುಸಿತಕ್ಕೆ ಕಾರಣವೇನು ಗೊತ್ತೇ ?*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರ ಕುಸಿತಕ್ಕೆ ಕಾರಣವೇನು ಗೊತ್ತೇ ?*

ಮೇ 6, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬೆಂಗಳೂರು ಮೇ 6 NEWS DESK : ಕಳೆದ ಕೆಲ ತಿಂಗಳುಗಳಿಂದ ಏರುಮುಖವಾಗಿದ್ದ ಕಾಫಿ ದರವು ಕಳೆದ ಐದು ದಿನಗಳಿಂದ ಇಳಿಮುಖವಾಗಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಏಪ್ರಿಲ್‌ ಕೊನೆ ವಾರದಲ್ಲಿ ಸರ್ವಕಾಲಿಕ ದಾಖಲೆ ಏರಿಕೆ ಆಗಿ ಬೆಳೆಗಾರರಿಗೆ ಸಂತಸ ನೀಡಿದ್ದ ರೋಬಸ್ಟಾ ಕಾಫಿ ದರ ಕಳೆದ ಏಪ್ರಿಲ್‌ 29 ರಿಂದ ಕುಸಿತ ಕಾಣುತಿದ್ದು ಆತಂಕದ ಅಲೆ ಸೃಷ್ಟಿಸಿದೆ. ಲಂಡನ್‌ ಕಾಫಿ ಮಾರುಕಟ್ಟೆಯಲ್ಲಿ ರೊಬಸ್ಟಾ ಪಾರ್ಚ್‌ ಮೆಂಟ್‌ ಪ್ರತೀ ಟನ್‌ ಗೆ 4165 ಅಮೆರಿಕನ್‌ ಡಾಲರ್‌ ಗಳಿಗೆ ವಹಿವಾಟು ಆಗುತಿದ್ದ ಕಾಫಿ ನಾಲ್ಕು ದಿನಗಳ ಸತತ ಕುಸಿತದ ನಂತರ ಶುಕ್ರವಾರ ಸಂಜೆಯ ವೇಳೆಗೆ ಪುನಃ ಕುಸಿದು 3550 ಡಾಲರ್‌ ಗಳಿಗೆ ವಹಿವಾಟು ಮುಗಿಸಿದೆ.
ಭಾರತೀಯ ಕಾಫಿಯು ತನ್ನ ಉತ್ಕೃಷ್ಟ ಗುಣಮಟ್ಟದ ಕಾರಣದಿಂದಾಗಿ ಮೊದಲಿನಿಂದಲೂ ಪ್ರೀಮಿಯಂ ಬೆಲೆಗೆ ಮಾರಾಟ ಆಗುತ್ತಿದೆ. ದೇಶದಲ್ಲಿ ಉತ್ಪಾದನೆಯಾಗುವ ಬಹುತೇಕ ಕಾಫಿ ರಫ್ತು ಆಗುವುದರಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ದರ ನಿಗದಿ ಆಗುತ್ತದೆ.
ಏರುಮುಖವಾಗಿದ್ದ ಕಾಫಿ ದರ ಕುಸಿತಕ್ಕೆ ನಿರ್ದಿರ್ಷ ಕಾರಣಗಳೇನೂ ಇಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ. ಅಂತರ್ರಾಷ್ಟ್ರೀಯ ವಾಗಿ ಸರಕುಗಳ ಮಾರಾಟವು ಆನ್‌ಲೈನ್‌ ಮತ್ತು ಕಮಾಡಿಟಿ ಫ್ಯೂಚರ್‌ ಮಾರುಕಟ್ಟೆಯ ಮೂಲಕವೇ ನಡೆಯುವುದರಿಂದ ಮತ್ತು ಇಂದೇ ದರ ನಿಗದಿ ಆಗಿದ್ದರೂ ಭೌತಿಕವಾಗಿ ಸರಕುಗಳನ್ನು ಸರಬರಾಜು ಮಾಡಲು 1-2 ತಿಂಗಳ ಸಮಯಾವಕಾಶವೂ ಇರುತ್ತದೆ. ಉದಾಹರಣೆಗೆ ಕಂಪೆನಿಯೊಂದು ತಾನು ಭೌತಿಕವಾಗಿ ಕಾಫಿ ಸ್ಟಾಕ್‌ ನ್ನೇ ಹೊಂದಿರದಿದ್ದರೂ ಖರೀದಿದಾರರಿಗೆ 1000 ಟನ್‌ ಕಾಫಿಯನ್ನು ಸರಬರಾಜು ಮಾಡಲು ಒಪ್ಪಂದ ಮಾಡಿಕೊಳ್ಳುತ್ತದೆ ಎಂದಿಟ್ಟುಕೊಳ್ಳಿ. ಕಂಪೆನಿಯ ಬಳಿ ಕೇವಲ ನೂರು ಟನ್‌ ಕಾಫಿ ಭೌತಿಕ ದಾಸ್ತಾನು ಇರುತ್ತದೆ. ಉಳಿದ 900 ಟನ್‌ ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಸರಬರಾಜು ಮಾಡಬೇಕಾಗುತ್ತದೆ. ಕಂಪೆನಿ ಮಾರಾಟ ಒಪ್ಪಂದದಂತೆ ಸರಬರಾಜು ಮಾಡಲೇ ಬೇಕಿರುವುದರಿಂದ ಕೆಲವೊಮ್ಮೆ ನಷ್ಟ ಆದರೂ ಕ್ಯಾಶ್‌ ಮಾರುಕಟ್ಟೆಯಲ್ಲಿ ಕಾಫಿ ಖರೀದಿಸುತ್ತದೆ. ಇದೇ ರೀತಿ ನೂರಾರು ಮಾರಾಟಗಾರರು ಖರೀದಿಗೆ ಮುಂದಾದಾಗ ಮಾರುಕಟ್ಟೆಯಲ್ಲಿ ಸತತ ದರ ಏರಿಕೆಗೆ ಕಾರಣವಾಗುತ್ತದೆ. ಇದನ್ನು ಶಾರ್ಟ್‌ ಬೈಯಿಂಗ್‌ (short buying) ಎನ್ನುತ್ಥಾರೆ ಶಾರ್ಟ್‌ ಸೆಲ್ಲಿಂಗ್‌ ಕೂಡ ಇರುತ್ತದೆ..ಕೆಲವೊಮ್ಮೆ ಬಳಕೆ ಹೆಚ್ಚಾದಾಗ ಬೇಡಿಕೆಯೂ ಹೆಚ್ಚಿ ದರ ಏರಿಕೆಗೆ ಕಾರಣ ಆಗುತ್ತದೆ.
ಇನ್ನು ದರ ಕುಸಿತವಾಗಲೂ ಇದೇ ರೀತಿಯ ವಹಿವಾಟು ಕಾರಣ ಆಗಬಹುದು. ಬೇಡಿಕೆ ಕಡಿಮೆ ಆಗಿ ಅಥವಾ ಮಾರಾಟಗಾರರು ಸಾಕಷ್ಟು ಭೌತಿಕ ದಾಸ್ತಾನು ಹೊಂದಿದ್ದಾಗ ಖರೀದಿಗೆ ಮುಂದಾಗುವುದಿಲ್ಲ ಆಗ ದರ ಕುಸಿತಕ್ಕೆ ಕಾರಣ ಆಗಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ದರ ಕುಸಿತಕ್ಕೂ ಇದೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ ಕ್ಯಾಶ್‌ ಮಾರುಕಟ್ಟೆಯ ಮೂಲಕವೂ ವಹಿವಾಟು ನಡೆಯುತ್ತದೆ. ಒಟ್ಟಿನಲ್ಲಿ ಅಲ್ಲದವರೂ ಕೂಡ ಆನ್‌ ಲೈನ್‌ ನಲ್ಲಿ ಕಾಫಿ ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ. ಇದಕ್ಕೂ ಷೇರು ಮಾರುಕಟ್ಟೆಯ ಫ್ಯೂಚರ್‌ ಮಾರುಕಟ್ಟೆಗೂ ವ್ಯತ್ಯಾಸವೇನೂ ಇಲ್ಲ. ಒಟ್ಟು ಮೌಲ್ಯದ ಶೇಕಡಾ 10-20 ರಷ್ಟು ಹಣ ಹೂಡಿಕೆ ಮಾಡಿದರೆ ವಹಿವಾಟು ಮಾಡಬಹುದಾಗಿದೆ.
ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶಗಳಾದ ಬ್ರೆಜಿಲ್‌ , ವಿಯಟ್ನಾಂ ದೇಶಗಳಲ್ಲಿ ಹವಾಮಾನದ ಕಾರಣದಿಂದಾಗಿ ಕಾಫಿ ಉತ್ಪಾದನೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳೆ ಬರುವವರೆಗೆ ಕಾಫಿ ದರ ಏರಿಕೆ ಆಗಲಿದೆ ಎಂದೇ ತಜ್ಞರ ಅಭಿಪ್ರಾಯ ಆಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ರೊಬಸ್ಟಾ ಚೆರಿ ದರ 50 ಕೆಜಿ ಚೀಲಕ್ಕೆ 8500-8700 ಕ್ಕೆ ಹಾಗೂ ಪಾರ್ಚ್‌ಮೆಂಟ್‌ ದರ 14,500-14,600 ಕ್ಕೆ ಇಳಿಕೆ ಆಗಿದೆ. ಈ ದರಗಳು ಮೊದಲು 10,500 ಮತ್ತು 16,400 ರ ವರೆಗೂ ಸರ್ವಕಾಲಿಕ ಏರಿಕೆ ದಾಖಲಿಸಿತ್ತು. ಅರೇಬಿಕಾ ಚೆರಿ ಹಾಗೂ ಪಾರ್ಚ್‌ಮೆಂಟ್‌ ದರಗಳು ರೊಬಸ್ಟಾ ದರಕ್ಕೆ ಸನಿಹದಲ್ಲಿಯೇ ಇವೆ.

ವರದಿ : ಕೋವರ್‌ ಕೊಲ್ಲಿ ಇಂದ್ರೇಶ್‌  

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.