ಮಡಿಕೇರಿ ಮೇ 6 NEWS DESK : ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶದ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಂಜಾನೆಯಿಂದ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭೀಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು.
ಪೂವಾಹ್ನ ಉಡುಪಿಯ ಪೆರ್ಲಂಪಾಡಿ ರಮಾನಂದ ಭಟ್ ನಾಗಪಾತ್ರಿಗಳಾಗಿ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಸಿಕೊಟ್ಟರು. ನಂತರ ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ 7.30 ರಿಂದ ಮರುದಿನದ ವರೆಗೆ ಶ್ರೀ ಪಾಷಾಣಮೂರ್ತಿ ದೈವ ಕೋಲ ನಡೆಯಲಿದೆ.
::: ಅಗೆಲು ಸೇವೆ :::
ರಾತ್ರಿ 7.30ರಿಂದ ಶ್ರೀ ಪಾಷಾಣಮೂರ್ತಿ ದೈವದ ಅಗೆಲು ಸೇವೆ ನಡೆಯಲಿದೆ.