ಸೋಮವಾರಪೇಟೆ ಮೇ 6 NEWS DESK : ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಬಸವೇಶ್ವರ ಪ್ರತಿಮೆಯನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹಿಸಿದ್ದಾರೆ.
ಕಳೆದ 24 ವರ್ಷಗಳ ಹಿಂದೆ ಪಟ್ಟಣದ ಕಕ್ಕೆ ಹೊಳೆ ಸಮೀಪ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಕಳೆದ 4 ತಿಂಗಳ ಹಿಂದೆ ಸೇತುವೆ ಕಾಮಗಾರಿಗಾಗಿ ಪ್ರತಿಮೆ ತೆರವುಗೊಳಿಸಲಾಗಿದ್ದು ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ ಆದರೆ ಮೇ 10 ರಂದು ಬಸವಜಯಂತಿ ಇದ್ದು ಈ ಭಾರಿ ಕರ್ನಾಟಕ ರಾಜ್ಯ ಸರ್ಕಾರ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಹೆಮ್ಮೆಯಾಗಿದೆ.
ಇಂತಹ ಸಂದರ್ಭದಲ್ಲಿ ಪ್ರತಿಮೆಯನ್ನು ಮುಚ್ಚೀಡಾಲಾಗಿದೆ ,ಬಸವಜಯಂತಿಯ ದಿನವಾದರೂ ಅದನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಿ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಯೊಂದಿಗೆ ಗೌರವ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ತಹಶೀಲ್ದಾರ್ ನವೀನ್ ಕುಮಾರ್ ರವರಿಗೆ ಮನವಿ ಸಲ್ಲಿಸಿ,ಚರ್ಚಿಸಿದರು.
ಈ ಸಂದರ್ಭ ತಹಶೀಲ್ದಾರ್ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸವಜಯಂತಿಯ ಮಹತ್ವತಿಳಿಸಿ ಶುಕ್ರವಾರ ಕೆ ಅನುಕೂಲವಾಗುವಂತೆ ಗುರುವಾರದಂದು ತಾತ್ಕಾಲಿಕವಾಗಿ ಪ್ರತಿಮೆಯನ್ನು ಹಾಗೂ ಸುತ್ತಲಪ್ರದೇಶವನ್ನು ಶುಚಿಗೊಳಿಸಿಕೊಡಲು ಆದೇಶಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ತಿಳಿಸಿದ್ದಾರೆ.