ಸೋಮವಾರಪೇಟೆ ಮೇ 6 NEWS DESK : ಅಕ್ಕನ ಬಳಗದ ವತಿಯಿಂದ ಪಟ್ಟಣದ ಕರ್ಕಳ್ಳಿಯಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಕ್ಕನ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಳಗದ ಹಿರಿಯ ಸದಸ್ಯರಾದ ಸುಕನ್ಯಾ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷೆ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಶಿವಾದೇವಿ ಅವನೀಶ್ ಚಂದ್ರ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸಂಘದ ಉಪಾಧ್ಯಕ್ಷೆ ಗೀತರಾಜು, ಕಾರ್ಯದರ್ಶಿ ಮಾಯಾಗಿರಿಷ್, ಪದಾಧಿಕಾರಿಗಳಾದ ರಜಿನಿ, ದಿವ್ಯ, ಜಗಧಾಂಬ, ಅನುಪಮ, ನಂದಿನಿ, ಸರಿತಾ, ಸವಿತಾ ಹಾಗೂ ಮುಂತಾದವರು ಈ ಸಂದರ್ಭ ಹಾಜರಿದ್ದರು.