
ಮಡಿಕೇರಿ ಮೇ 8 NEWS DESK : ಸೋಮವಾರಪೇಟೆ ಮತ್ತು ಯಲಹಂಕ ಬೆಂಗಳೂರು ಲಯನ್ಸ್ ಕ್ಲಬ್ ಗಳ ಜಂಟಿ ಸಮಾವೇಶ ನಡೆಯಿತು. ನಂತರ ಗೋಣಿಮರೂರು ಹಾಲು ಉತ್ಪಾದಕರ ಸಹಕಾರ ಸಂಘದ ಸುಮಾರು 100 ಸದಸ್ಯರಿಗೆ ರೈನ್ ಕೋಟ್ ವಿತರಿಸಿದರು.ಈ ಸಂದರ್ಭ ಉಭಯ ಕ್ಲಬ್ ಗಳ ಅಧ್ಯಕ್ಷರಾದ ಮಹೇಶ್, ಜಯಪ್ರಕಾಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಕೊಮಲ ಧರ್ಮಪ್ಪ, ಕಾರ್ಯದರ್ಶಿ ಶ್ಯಾಮಲಾ ತಾರಣ್ಣಯ್ಯ, ಉಪಾಧ್ಯಕ್ಷ ಯಶೋಧಾ ತಿಮ್ಮಯ್ಯ ಹಾಗೂ ಎಲ್ಲಾ ಸದಸ್ಯರು, ಸೋಮವಾರಪೇಟೆ ಲಯನ್ಸ್ ಕ್ಲಬ್ ನ ಚಟ್ಠಿಮಾಡ ರೋಹಿತ್, ನಂಗಾರು ರಾಮಚಂದ್ರ ಯಲಹಂಕ ಲಯನ್ಸ್ ಕ್ಲಬ್ ನ ಜಿತೇಂದ್ರ, ನಂಗಾರು ನಿಂಗರಾಜು ಹಾಜರಿದ್ದರು.








