ಮಡಿಕೇರಿ ಮೇ 9 NEWS DESK : ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದ ಧರ್ಮದರ್ಶಿ ಎಲ್ಲೂಬಾಯಿ (96) ಅಮ್ಮನವರು ಬುಧವಾರ ರಾತ್ರಿ ಶಿವೈಕ್ಯರಾಗಿದ್ದು, ಇಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಮೃತ ಎಲ್ಲೂಬಾಯಿ ಅವರ ಅಂತ್ಯಕ್ರಿಯೆ ಅವರ ಅಪೇಕ್ಷೆಯಂತೆ ವೀರಶೈವ ಲಿಂಗಾಯಿತ ಪದ್ದತಿಯಂತೆ ನೆರವೇರಿತು. ಬೆಳಿಗ್ಗೆಯಿಂದಲೇ ದೇವಾಲಯದ ಧರ್ಮದಶಿ ಎಲ್ಲೂಬಾಯಿ ಅಮ್ಮನವರಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ದೇವಾಲಯದ ಆವರಣದಲ್ಲಿ ಎಲ್ಲೂಬಾಯಿ ಅವರ ಪಾರ್ಥಿವವನ್ನು ಕ್ರಿಯಾಸಮಾಧಿ ಮಣ್ಣು ಮಾಡುವ ಮೂಲಕ ನೆರವೇರಿಸಲಾಯಿತು. ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ ಸೇರಿದಂತೆ ಹಲವರು ಪಾಲ್ಗೊಂಡು ಅಂತಿಮ ಮನವ ಸಲ್ಲಿಸಿದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಮತ್ತೊಬ್ಬ ಪುತ್ರ ಕೊಡಗು ಜಿ.ಪಂ ಮಾಜಿ ಅಧ್ಯಕ್ಷರಾಗಿದ್ದ ಎಸ್.ಎನ್.ರಾಜಾರಾವ್ ಅನಾರೋಗ್ಯದಿಂದ ನಿಧನರಾಗಿದ್ದರು.
ವರದಿ : ಕೆ.ಆರ್.ಗಣೇಶ್ ಕೂಡಿಗೆ