ಮಡಿಕೇರಿ ಮೇ 13 NEWS DESK : ಕರಿಕೆಯ ಆಡ್ಕ ಗ್ರಾಮದ ಪುರಾತನ ದೈವಸ್ಥಾನದಲ್ಲಿ ಪ್ರತಿ ವರ್ಷದಲ್ಲಿ ಈ ಬಾರಿಯೂ ಶ್ರದ್ಧಾಭಕ್ತಿಯಿಂದ ದೈವ ಕೋಲಗಳು ನಡೆಯಿತು.
ಗ್ರಾಮದ ವನದೇವತಾರಾಧನ ಸಮಿತಿ ಮತ್ತು ಗ್ರಾಮಸ್ಥರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ನಂತರ ಚಾಮುಂಡಿ, ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲಗಳು ನೆರೆವೇರಿತು.
ಗ್ರಾಮದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.