ಮಡಿಕೇರಿ ಏ.14 NEWS DESK : ಗಾಂಧಿ ಯುವಕ ಸಂಘ ಕಂಡಕರೆ ಮತ್ತು ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿಯಿಂದ ಕೊಡಲಾಗುತ್ತಿರುವ “ಬಡವರ ಬೆಳಕು” ಪ್ರಶಸ್ತಿಗೆ ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಝಾಮಿ ಆಯ್ಕೆಯಾಗಿದ್ದಾರೆ.
ಜಾಬಿರ್ ನಿಝಾಮಿ ಅವರು ಸೇವ್ ದಿ ಡ್ರೀಮ್ಸ್ ಮೂಲಕ ಸಾವಿರಾರು ಬಡಜೀವಗಳನ್ನು ರಕ್ಷಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅನಾರೋಗ್ಯ ಪೀಡಿತರ ಆಸ್ಪತ್ರೆ ವೆಚ್ಚವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವುದರ ಮೂಲಕ ಹಣ ಸಂಗ್ರಹಮಾಡಿ ಜಾಬಿರ್ ನಿಝಾಮಿ ಬಡವರ ಬೆಳಕಾಗಿದ್ದಾರೆ. ಈ ಎಲ್ಲಾ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷರಾದ ಇಸ್ಮಾಯಿಲ್ ಕಂಡಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ವಿತರಣೆಯು ಜೂ.9 ರಂದು ಕಂಡಕರೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.