ಮಡಿಕೇರಿ ಮೇ 14 NEWS DESK : ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮದಲ್ಲಿ ನಟ್ ಕುಂದ್ ನದಿಗೆ ಎರಡು ಕಿಲೋಮೀಟರ್ ಅಂತರದಲ್ಲಿ ನಿರ್ಮಿಸಿರುವ 3 ಚೆಕ್ ಡ್ಯಾಮ್ ಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ವೈಫಲ್ಯ ಕಂಡಿರುವ ಯೋಜನೆಗಳನ್ನು ಮುಂಗಾರು ಮುನ್ನ ಸರಿಪಡಿಸಲು ಇಂಜಿನಿಯರ್, ಅಧಿಕಾರಿ ವರ್ಗ ಹಾಗೂ ಕಾಮಗಾರಿ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭ ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಅಕ್ರಮ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಗ್ರಾ.ಪಂ ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಬೊಳ್ಳೇರ ಪೊನ್ನಪ್ಪ, ಅಣ್ಣಳಮಾಡ ಚಿಣ್ಣಪ್ಪ, ಪ್ಯಾಕ್ಸ್ ನಿರ್ದೇಶಕ ಕರ್ತಮಾಡ ಮಿಲನ್, ಕಾಳಿಮಾಡ ರಶಿಕ್, ಕರ್ತಮಾಡ ನಂದ, ಕಳಕಂಡ ಜೀತು ಕುಶಾಲಪ್ಪ,ಬಲ್ಯಮೀದರೀರ ರನ್ನು ಮತ್ತಿತರರು ಹಾಜರಿದ್ದರು.