ಮಡಿಕೇರಿ ಮೇ 15 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಎನ್.ಎಸ್.ಯು.ಐ ಘಟಕದಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ಎಲ್ಲಾ ದಾನಕ್ಕಿಂತಲೂ ಅಮೂಲ್ಯವಾದ ರಕ್ತದಾನ. ಪ್ರತೀಯೋವ೯ರೂ ರಕ್ತದಾನ ಮಾಡುವ ಮೂಲಕ ರಕ್ತ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಹೇಳಿದರು.
ಪ್ರಸ್ತುತ ರಕ್ತನಿಧಿ ಕೇಂದ್ರದಲ್ಲಿ ರಕ್ತ ಲಭ್ಯವಿದೆಯಾದರೂ ತುತು೯ ಸಂದಭ೯ದಲ್ಲಿ ರೋಗಿಗಳಿಗೆ ನೀಡಲು ರಕ್ತದ ಸಂಗ್ರಹ ಮತ್ತಷ್ಟು ಪ್ರಮಾಣದಲ್ಲಿ ಅಗತ್ಯವಿದೆ ಎಂದು ಡಾ.ಕರುಂಬಯ್ಯ ಹೇಳಿದರು.
ವಾಹನ ಅಪಘಾತ ಪ್ರಮಾಣ ಕೂಡ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೂ ರಕ್ತದ ತೀವ್ರ ಅಗತ್ಯ ಕಂಡು ಬರುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತ ನೀಡಲು ಮುಂದಾಗುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಎನ್ ಎಸ್ ಯು ಐ ಘಟಕದ ಜಿಲ್ಲಾಧ್ಯಕ್ಷ ರಾಶಿದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ನ ಜಿಲ್ಲಾಧ್ಯಕ್ಷ ತೇನ್ನಿರಾ ಮೈನಾ, ಕಾಲೇಜಿನ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್, ಸಮಾಜ ಸೇವಕರಾದ ವಿನ್ಸೆಂಟ್ ಸಮೀರ್, ಇದಾಯತುಲ್ಲ ಬಯ್ಯ, ಶಾಲೆಯ ಶಿಕ್ಷಕರಾದ ಸೌಮ್ಯಲತಾ, ಎನ್.ಎಸ್.ಯು.ಐ ಘಟಕದ ಗಾನಶ್ರೀ, ಹ್ಯಾರಿಸ್, ಶರಣ್ ಅರ್ಜುನ್, ಕಾರ್ತಿಕ್, ಮಿಥಲಾಸ್, ಹಾಗೂ ಎನರ್ಜಿಯ ಘಟಕದ ಕಾರ್ಯಕರ್ತರು ಮತ್ತು ರಕ್ತದಾನಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ವಿನ್ಸೆಂಟ್ ಸಮೀರ್ ಮತ್ತು ಇದಾಯತುಲ್ಲ ಬಯ್ಯ ಹಾಗೂ ಬ್ಲಡ್ ಬ್ಯಾಂಕ್ ನ ವೈದ್ಯರಾದ ಡಾ.ಕರಂಬಯ್ಯ ಅವರನ್ನು ಎನ್.ಎಸ್.ಯು.ಐ ಘಟಕ ಹಾಗೂ ಶಾಲೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.