ಮಡಿಕೇರಿ ಮೇ 16 NEWS DESK : ಗಾಂಧಿ ಯುವಕ ಸಂಘ ಕಂಡಕರೆ ವತಿಯಿಂದ ನೀಡಲಾಗುವ “ಮಾದರಿ ಸಮಾಜ ಸೇವಕ” ಪ್ರಶಸ್ತಿಗೆ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಹಿರಿಯ ಸಲಹೆಗಾರ ಮತ್ತು ಎಸ್.ಎನ್.ಡಿ.ಪಿ ಮಡಿಕೇರಿ ಶಾಖಾ ಅಧ್ಯಕ್ಷ ಟಿ.ಆರ್ ವಾಸುದೇವ್ ಹಾಗೂ ಕೊಡಗು ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಆಯ್ಕೆಯಾಗಿದ್ದಾರೆ.
ಟಿ.ಆರ್ ವಾಸುದೇವ್ ಮತ್ತು ಪಿ.ಎಂ ಲತೀಫ್ ಸುಂಟ್ಟಿಕೊಪ್ಪ ಅವರ ಸಮಾಜ ಸೇವೆಯನ್ನು ಗುರುತಿಸಿ ಮಾದರಿ ಸಮಾಜ ಸೇವಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಜೂ.9 ರಂದು ಕಂಡಕರೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷ ಮತ್ತು ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ತಿಳಿಸಿದ್ದಾರೆ.