Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
  • *‘ಜಂತು ಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು’ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ*
  • *ಫೆ.14 ರಂದು ಕೊಡವ ಭವನ ಉದ್ಘಾಟನೆ*
  • *ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*
  • *ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*
  • *104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಓಂಕಾಳು ಬಳಕೆಯಿಂದಾಗುವ ಅದ್ಭುತ ಆರೋಗ್ಯ ಪ್ರಯೋಜನಗಳು*
ಇತ್ತೀಚಿನ ಸುದ್ದಿಗಳು

*ಓಂಕಾಳು ಬಳಕೆಯಿಂದಾಗುವ ಅದ್ಭುತ ಆರೋಗ್ಯ ಪ್ರಯೋಜನಗಳು*

May 20, 20243 Mins Read
Share
Facebook Twitter LinkedIn Pinterest WhatsApp Email

ಓಂ ಕಾಳನ್ನು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತಲೇ ಇರುತ್ತೇವೆ. ಆದರೆ, ಈ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಸಾಕಷ್ಟು ಮಂದಿ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳಿಂದ ಬಳಲುತ್ತಿರುತ್ತಾರೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ, ಇದಕ್ಕಾಗಿ ಹಲವು ಔಷಧಗಳ ಮೊರೆ ಹೋಗಿರುತ್ತಾರೆ. ಆದರೆ, ಓಂ ಕಾಳುಗಳು ಇಂತಹ ಹುಣ್ಣುಗಳನ್ನು ವಾಸಿಮಾಡಲು ಪರಿಣಾಮಕಾರಿಯಾಗಿದೆ ಎಂದರೆ ಆಶ್ಚರ್ಯವಾಗಬಹುದು.

ಓಂ ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆಯ ವಿಳಂಬವಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯ ತೊಂದರೆಗಳನ್ನು ಸರಿಮಾಡಿಕೊಳ್ಳಲು ಅರ್ಧ ಚಮಚದಷ್ಟು ಓಂಕಾಳು ಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

ಕಾಳುಗಳು ತೈವನ್ ಎಂಬ ಅಂಶವನ್ನು ಒಳಗೊಂಡಿದೆ. ಈ ಅಂಶವು ಕೀಟಾಣುಗಳ ಹಾಗೂ ಶಿಲಿಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಲವಾರು ಚರ್ಮ ಸಮಸ್ಯೆಗಳು ಶಿಲಿಂಧ್ರದ ಮುಖಾಂತರ  ಬರಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ನಿಮಿಷಗಳಲ್ಲಿ ಓಂಕಾಳು ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಕೆಲವು ಓಂ ಕಾಳುಗಳನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಅವುಗಳನ್ನು ನಿಮ್ಮ ಚರ್ಮ ಸಮಸ್ಯೆ ಇರುವ ಜಾಗಕ್ಕೆ ನೇರವಾಗಿ ಹಚ್ಚಬಹುದು. ಮೊಡವೆ ಅಥವಾ ಕಲೆಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಓಂ ಕಾಳುಗಳ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ನಂತೆ ತಯಾರಿಸಿ. ಇದನ್ನು ಮೊಡವೆಗಳು ಇರುವ ಜಾಗಕ್ಕೆ ಹಚ್ಚಿ 15 ನಿಮಿಷದ ವರೆಗೆ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಿ.

ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವುಗಳು ನಮ್ಮ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಸಂಭವಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಓಂ ಕಾಳುಗಳು ಸಹಾಯ ಮಾಡುತ್ತದೆ. ಜೀರ್ಣವಾಗದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಕೂಡ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರ ಮುಖಾಂತರ ಈ ತೊಂದರೆಯಿಂದ ಹೊರಬರಬಹುದು. ಓಂ ಕಾಳುಗಳನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಹಾಗೂ ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿ ಮಾಡಿಕೊಳ್ಳಬಹುದು. ಓಂ ಕಾಳುಗಳನ್ನು ಸ್ವಲ್ಪ ಹುರಿದು ನಂತರ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯಬಹುದು.

ಓಂಕಾಳು ಗಳಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ಕೂಡ ತೆಗೆಯಲು ಸಹಾಯ ಮಾಡುತ್ತದೆ. ಆರ್ಥ್ರೈಟಿಸ್ ನಿಂದ ಉಂಟಾದ ಮೂಳೆಗಳ ಬಳಿ ಇರುವ ಕೆಂಪು ಕಲೆಗಳು ಹಾಗೂ ನೋವನ್ನು ಇದು ಹೋಗಲಾಡಿಸುತ್ತದೆ. ಓಂ ಕಾಳುಗಳಲ್ಲಿ ಉರಿಯೂತ ಗಳನ್ನು ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್ ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಓಂ ಕಾಳುಗಳನ್ನು ನಿಂಬೆಯ ರಸದಲ್ಲಿ ನೆನೆಸಿ ಇದಕ್ಕೆ ಕಪ್ಪು ಉಪ್ಪನ್ನು ಬೆರೆಸಿ ಸೂರ್ಯನ ಕಿರಣಗಳ ಕೆಳಗೆ ಒಣಗಿಸಿದಾಗ ನಂತರದ ದಿನಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಇವುಗಳನ್ನು ಬಳಸಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಕಾಳುಗಳನ್ನು ಉಪಯೋಗಿಸುವ ವಿಧವೆಂದರೆ ನಿಮ್ಮ ಟೀ ಜೊತೆಗೆ ಓಂ ಕಾಳುಗಳನ್ನು ಬೇಯಿಸಿ ಕುಡಿಯಬಹುದು.

ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.

ಓಂ ಕಾಳು ನಮ್ಮ ದೇಹದ ಜೀರ್ಣಕಾರಿ ಅಂಗಗಳಾದ ಹೊಟ್ಟೆ, ಕರುಳು ಮತ್ತು ಹುಣ್ಣಿನಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಓಂ ಕಾಳು ಹೆಚ್ಚಾಗಿ ಆಮ್ಲೀಯತೆ, ಗ್ಯಾಸ್ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನೀವು ಅರ್ಧ ಟೀ ಚಮಚ ಓಂ ಕಾಳು ಜಗಿದು ರಸ ನುಂಗಬೇಕು ಅಥವಾ ನೀರಿನೊಂದಿಗೆ ಈ ಕಾಳನ್ನು ಕುದಿಸಿ ಕೂಡ ಕುಡಿಯಬಹುದು.

ಒತ್ತಡ ಹಾಗೂ ಆಹಾರ ಕ್ರಮಗಳಿಂದ ಬಹಳ ಚಿಕ್ಕ ವಯಸ್ಸಿಗೆ ಬಿಳಿಕೂದಲು ಆರಂಭವಾಗುತ್ತದೆ. ಇಂತಹ ಸಮಸ್ಯೆಗೆ ಹಾಗೂ ಕೂದಲು ಉದುರುವ ಸಮಸ್ಯೆಗೆ ಓಂ ಕಾಳುಗಳನ್ನು ಬಳಸಿಕೊಳ್ಳಬಹುದು.

ಬಿಳಿ ಕೂದಲನ್ನು ಹೋಗಲಾಡಿಸಬೇಕು ಎಂದುಕೊಂಡಿದ್ದರೆ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಓಂ ಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ನೀವು ಓಂ ಕಾಳನ್ನು ಹಲವು ವಿಧಗಳಲ್ಲಿ ಬಳಸಬಹುದು. ದಾಲ್, ಕರಿ ಅಥವಾ ಸಾಂಬಾರು ಮಾಡುವಾಗ ನೀವು ಓಂ ಕಾಳಿನ ಪುಡಿಯನ್ನು ಬಳಸಬಹುದು. ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಜೀರಿಗೆ ಬದಲು ಓಂ ಕಾಳು ಬಳಸಬಹುದು. ಇದನ್ನು ಮೌತ್ ಫ್ರೆಶ್ನರ್ ಆಗಿ ಕೂಡ ಬಳಸಬಹುದಾಗಿದೆ. ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.

Share. Facebook Twitter Pinterest LinkedIn Tumblr Email WhatsApp
Previous Article*ಕೊಡವ ಮಕ್ಕಡ ಕೂಟದ 100 ನೇ ಪುಸ್ತಕ : ಲೇಖನಗಳ ಆಹ್ವಾನ*
Next Article *ಹೆಲಿಕಾಪ್ಟರ್ ನಲ್ಲಿದ್ದವರು ಸಜೀವ ದಹನ*

Related Posts

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

ಮಡಿಕೇರಿ,  NEWS DESK ಫೆ.10:-ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ,…

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026

*ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*

February 10, 2026

*ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*

February 10, 2026

*104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*

February 10, 2026

*ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*

February 10, 2026

*ಫೆ.15ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.