ಗುಂಡ್ಲುಪೇಟೆ ಮೇ 23 NEWS DESK : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದಿನಿಂದ ಕಾಡಾನೆಗಳ ಲೆಕ್ಕ ಆರಂಭಗೊಂಡಿದೆ. ಒಟ್ಟು 13 ವಲಯದ 113 ಬೀಟ್ ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆದುಕೊಂಡು ಆನೆಗಳ ಲೆಕ್ಕ ಹಾಕಿದ್ದಾರೆ. ಅಭಯಾರಣ್ಯದಲ್ಲಿ ಆನೆ ಗಣತಿ ಮೂರು ದಿನಗಳ ಕಾಲ ನಡೆಯಲಿದ್ದು, ಮೊದಲ ದಿನ ಅರಣ್ಯದಲ್ಲಿ ನಡೆದುಕೊಂಡು ಗಣತಿ ಆರಂಭಿಸಿದ್ದಾರೆ. ಎರಡನೇ ದಿನ ಆನೆ ಲದ್ದಿಯನ್ನು ಪತ್ತೆಹಚ್ಚಿ ಒಂಟಿ ಆನೆಯೋ, ಗುಂಪುಗಳ ಆನೆಯೋ ಎಂದು ಅಂದಾಜು ಲೆಕ್ಕ ಹಾಕಲಾಗುತ್ತದೆ. ಮೂರನೇ ದಿನ ಕೆರೆಗಳ ಬಳಿ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ಕಾದು ಆನೆಗಳು ನೀರು ಕುಡಿಯುವಾಗ ಬರುವ ಆನೆಗಳ ಲೆಕ್ಕವನ್ನು ಹಾಕಲಿದ್ದಾರೆ.