ಕುಶಾಲನಗರ ಮೇ 25 NEWS DESK : ನೃತ್ಯ ಮೂಲಕ ಚಲನೆಯ ವ್ಯಾಪ್ತಿ, ದೈಹಿಕ ಶಕ್ತಿ ಮತ್ತು ದೇಹದ ತ್ರಾಣವನ್ನು ಅಧಿಕಗೊಳಿಸುತ್ತದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಟೀಮ್ ಡ್ರೀಮ್ ಸ್ಟಾರ್ ನೃತ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನೃತ್ಯ ವ್ಯಾಯಾಮದ ಒಂದು ಭಾಗವಾಗಿದೆ ಮತ್ತು ಚಿಕ್ಕ ವಯಸ್ಸಿನಿಂದಲೇ ನೃತ್ಯದ ಹಿಡಿತ ಜೀವನದಲ್ಲಿ ಸಕ್ರಿಯವಾಗಿರಲು ಪ್ರೇರಪಣೆ ನೀಡುತ್ತದೆ ಎಂದರು.
ಜಿ.ಪಂ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್, ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಮ್ ಮತ್ತಿತರರು ಮಾತನಾಡಿದರು.
ಪಟ್ಟಣದ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು. ಜೂನಿಯರ್ ವಿಭಾಗದಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ನೃತ್ಯ ಸಂಸ್ಥೆ ಪ್ರಥಮ, ಮಡಿಕೇರಿಯ ನಾಟ್ಯಕಲ ದ್ವಿತೀಯ, ಕಿಂಗ್ಸ್ ಆಫ್ ಕೂರ್ಗ್ ತೃತೀಯ ಬಹುಮಾನ ಪಡೆಯಿತು.
ಸೀನಿಯರ್ ವಿಭಾಗದಲ್ಲಿ ಸೋಮವಾರಪೇಟೆಯ ಟೀಮ್ ಅಡ್ವೆಂಚರ್ ಡಾನ್ಸ್ ಸ್ಟುಡಿಯೋ ಪ್ರಥಮ, ಮಡಿಕೇರಿಯ ನಾಟ್ಯಕಲ ನೃತ್ಯ ಸಂಸ್ಥೆ ದ್ವಿತೀಯ ಬಹುಮಾನಗಳಿಸಿತು.
ಚಾಮರಾಜನಗರದ ಪ್ರವೀಣ್ ಕುಮಾರ್, ಬೆಂಗಳೂರಿನ ಸುಮಿತ್ ,ಭೂಮಿಕ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಕೊಡವ ಸಮಾಜದ ಅಧ್ಯಕ್ಷ ಬೋಸ್ ಮೊಣ್ಣಪ್ಪ, ಸರಳ ರಾಮಣ್ಣ, ಪತ್ರಕರ್ತರಾದ ಜಯಪ್ರಕಾಶ್, ಮಹಮದ್ ಮುಸ್ತಾಫ, ಸುರ್ಜಿತ್, ಆಯೋಜಕರಾದ ಶರಣ್, ಆನಂದ್, ಪವನ್, ಸೀಮಾ, ಚೈತನ್ಯ, ವಿನುತಾ, ಯಶಸ್, ಕಾರ್ತಿಕ್ ಮತ್ತಿತರರು ಇದ್ದರು.