ಮಡಿಕೇರಿ ಜೂ.2 NEWS DESK : ಕೊಳ್ಳೇಗಾಲ ಕಾಮಗೆರೆಯ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ನ ಧರ್ಮಗುರುಗಳು ಮತ್ತು ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿ ರೆ.ಫಾ.ಐಸಾಕ್ ರತ್ನಾಕರ್ ರವರು ಅಧಿಕಾರವನ್ನು ಸ್ವೀಕರಿಸಿದರು. ಮೈಸೂರು ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳಾದ ಫಾ.ಆಲ್ಫ್ರೆಡ್ ಜಾನ್ ಮೆಂಡೋಂಜಾ ಚರ್ಚ್ ನಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಅಧಿಕಾರವನ್ನು ಹಸ್ತಾಂತರ ಮಾಡಿಸಿದರು ಮತ್ತು ವಿಶೇಷ ಪೂಜಾ ಕಾರ್ಯಕ್ರಮವು ಈ ಸಂದರ್ಭದಲ್ಲಿ ಜರುಗಿತು. ರೆ.ಫಾ.ಐಸಾಕ್ ರತ್ನಾಕರ್ ರವರು ಈ ಹಿಂದೆ ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿ ಜನಾನುರಾಗಿದ್ದರು. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಹನೂರು ಕ್ಷೇತ್ರದ ಶಾಶಕರಾದ ಎಂ. ಆರ್. ಮಂಜುನಾಥ್ ರವರು ಚರ್ಚ್ ಗೆ ಆಗಮಿಸಿ ನೂತನ ಧರ್ಮಗುರುಗಳಿಗೆ ಶುಭ ಕೋರಿದರು. ಭಕ್ತರು, ಸಾರ್ವಜನಿಕರು, ಚರ್ಚ್ ಪಾಲನಾ ಸಮಿತಿಯವರು ಉಪಸ್ಥಿತರಿದ್ದರು.










