ಮಡಿಕೇರಿ ಜೂ.2 NEWS DESK : ಕಳೆದ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಮಳೆಗಾಲದಲ್ಲಿ ಮಳೆಯ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆಯ ನಿವೃತ್ತ ಉಪ ಮಹಾ ನಿರ್ದೇಶಕ ಡಾ.ಹೆಚ್.ಎಸ್.ಎಂ.ಪ್ರಕಾಶ್ ತಿಳಿಸಿದ್ದಾರೆ.
ಇಂದಿನವರೆಗಿನ ಜಿಯೋ ಮೀಟಿಯೋರಾಲಜಿ ಅಧ್ಯಯನದ ಆಧಾರದಂತೆ 2024ನೇ ಸಾಲಿನ ಜೂನ್ ನಿಂದ ಸೆಪ್ಟೆಂಬರ್ ಅವಧಿಯ ಮುಂಗಾರು ಕಳೆದ 2023ನೇ ಸಾಲಿನ ಪರಿಸ್ಥಿತಿಯಂತೆ ಇರಲಿದೆ ಎನ್ನುವುದು ತಿಳಿದು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ಸಾಲಿನ ಮುಂಗಾರು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ತೀರಾ ದುರ್ಬಲವಾಗಿದ್ದ ಹಿನ್ನೆಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿ ಜಿಲ್ಲೆಯ ತಾಲ್ಲೂಕುಗಳನ್ನು ಬರದ ಪಟ್ಟಿಗೆ ಸೇರಿಸಲಾಗಿತ್ತು.
ಈ ಬಾರಿಯ ಮುಂಗಾರು ಕೂಡ ಕೊರತೆಯ ಮುಂಗಾರು ಆಗುವ ಸಾಧ್ಯತೆಯಿದೆ. ಹಿಂಗಾರಿನ ಬಗ್ಗೆ ಅಕ್ಟೋಬರ್ 2024ರ ಮೊದಲ ವಾರದಲ್ಲಿ ನಿಷ್ಕರ್ಷೆ ಮಾಡಬಹುದಾಗಿದೆ ಎಂದು ಡಾ.ಹೆಚ್.ಎಸ್.ಎಂ.ಪ್ರಕಾಶ್ ಹೇಳಿದ್ದಾರೆ.
::: ಕೊರತೆಗೆ ಕಾರಣ :::
ಆವಿಯ ಮೂಲಗಳಾದ ಭಾರತ ದೇಶದ ಸುತ್ತಮುತ್ತಲಿನ ಸುಮತ್ರ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಪಪುವಾ ನ್ಯೂ ಗಿನಿಯಾ, ಜಪಾನ್, ಕಾಮಚಟ್ಕ, ಅರಬೀ ಸಮುದ್ರ, ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯಲ್ಲಿನ ಮುಖ್ಯವಾದ ಮತ್ತು ದೊಡ್ಡ ಮಟ್ಟದ ಜ್ವಾಲಾಮುಖಿಗಳು ನಿಷ್ಕಿçÃಯಯಾಗಿರುವುದೇ ಮಳೆಯ ಕೊರತೆಗೆ ಕಾರಣವಾಗಿದೆ. ಇವುಗಳು ಮುಂದಿನ ತಿಂಗಳುಗಳಲ್ಲಿ ಸಕ್ರಿಯವಾಗುವ ಯಾವ ಮುನ್ಸೂಚನೆಗಳು ಇಂದಿನವರೆಗೂ ಕಂಡು ಬಂದಿಲ್ಲ. ಹಾಗಾಗಿ ಇಂದಿನ ಪರಿಸ್ಥಿತಿ 2023ರ ಪರಿಸ್ಥಿತಿಯ ಹಾಗೆ ಇರುವುದರಿಂದ ಮಳೆಯ ಪ್ರಮಾಣವು ಕಳೆದ ಬಾರಿಯಷ್ಟೇ ಇರುವ ಸಾಧ್ಯತೆ ಇದೆಯೆಂದು ಅಭಿಪ್ರಾಯಪಟ್ಟಿದ್ದಾರೆ
ಪ್ರಮುಖ ಜ್ವಾಲಾಮುಖಿಗಳು ಸಕ್ರಿಯವಾದಾಗ ಸುತ್ತಮುತ್ತಲ ಸಮುದ್ರ ಪ್ರದೇಶದಲ್ಲಿ ಅತ್ಯಂತ ದೊಡ್ಡ ಮುಟ್ಟದ ಆವಿಯ ಮೋಡಗಳು ಉತ್ಪತ್ತಿಯಾಗುತ್ತವೆ ಮತ್ತು ಅವು ಮಾರುತಗಳೊಂದಿಗೆ ಬೆರೆತು ಮುಂದೆ ಸಾಗುತ್ತವೆ. ಅಂತಹ ಭಾರೀ ಮೋಡಗಳು ಉತ್ತಮ ಮತ್ತು ಅತೀ ಹೆಚ್ಚಿನ ಮಳೆಗೆ ಕಾರಣವಾಗುತ್ತವೆ. ಆದರೆ, ಪ್ರಸ್ತುತ ಭಾರತದ ಆಸುಪಾಸಿನ ಜ್ವಾಲಾಮುಖಿಗಳು ಸಕ್ರಿಯವಾಗದಿರುವುದೆ ಮುಂಗಾರಿನ ಕೊರತೆಗೆ ಕಾರಣವಾಗಬಹುದು ಎಂದು ಡಾ.ಪ್ರಕಾಶ್ ತಿಳಿಸಿದ್ದಾರೆ.
ಮಳೆೆಯ ಕೊರತೆ ಉಂಟಾದಲ್ಲಿ 2025ರ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಜಲ ಕೇಂದ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು, ಲಭ್ಯ ಮಳೆÉಯ ನೀರನ್ನು ಸಂಗ್ರಹಿಸುವ ನಿಟ್ಟಿನ ಪ್ರಯತ್ನಗಳನ್ನು ನಡೆಸುವುದು ಅವಶ್ಯಕವೆಂದು ಸಲಹೆ ನೀಡಿದ್ದಾರೆ.
::: ಪ್ರವಾಹ-ಭೂಕುಸಿತ ಇರಲ್ಲ :::
ಮುಂಗಾರು ಕೊರತೆಯಾಗುವುದರಿಂದ ಉತ್ತರ ಕರ್ನಾಟಕ, ಕೊಡಗು ಮತ್ತು ಕೇರಳದÀಲ್ಲಿ ಪ್ರವಾಹ, ಭೂಕುಸಿತ ಪ್ರಕರಣಗಳ ಸಾಧ್ಯತೆ ಕಡಿಮೆ ಇದೆ. 2018 ಮತ್ತು 2019ರ ದುರಂತ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದ್ದಾರೆ.
::: ಬರ ಪರಿಸ್ಥಿತಿ :::
ಕಳೆದ ವರ್ಷ ಮಳೆ ಕೊರತೆಯಾದ ಕಾರಣ ಪ್ರಸ್ತುತ ಬೇಸಿಗೆಯಲ್ಲಿ ಬರ ಪರಿಸ್ಥಿತಿ ಉಂಟಾಗಿತ್ತು. ಇದರ ಪರಿಣಾಮ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ದಶಕದಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿತ್ತು. 13-14 ಮೀ. ಆಸುಪಾಸಿನಲ್ಲಿರುವ ಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟ ಈ ವರ್ಷ 15.79 ಮೀ.ಗೆ ತಲುಪಿ, 10 ವರ್ಷದಲ್ಲಿ 2.35 ಮೀ. ಕುಸಿತ ಕಂಡುಬAದಿತ್ತು. ಕಳೆದ ಸಾಲಿನಲ್ಲಿ ಶೇ.38 ರಷ್ಟು ಮಳೆ ಕೊರತೆಯಾಗಿದ್ದು, ಇದು ಇತ್ತೀಚಿನ ವರ್ಷಗಳಲ್ಲಿಯೇ ಕೊಡಗು ಎದುರಿಸಿದ ತೀವ್ರ ಬರ ಪರಿಸ್ಥಿತಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 332.79 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 175.25 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ 464.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 250.42 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ ಮಳೆ 264 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 122.51 ಮಿ.ಮೀ, ಪೊನ್ನಂಪೇಟೆ ತಾಲ್ಲೂಕಿನಲ್ಲಿ 333.15 ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 133.99 ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ 253.50 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 136.41 ಮಿ.ಮೀ, ಕುಶಾಲನಗರ ತಾಲ್ಲೂಕಿನಲ್ಲಿ 349 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 232.90 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2824.12 ಅಡಿಗಳು. ಕಳೆದ ವರ್ಷ ಇದೇ ದಿನ 2819.46 ಅಡಿಗಳು. ಇಂದಿನ ನೀರಿನ ಒಳಹರಿವು 242 ಕ್ಯುಸೆಕ್, ಕಳೆದ ವರ್ಷ ಇದೇ ದಿನ 78 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್.
ಕಳೆದ ಎರಡು ವಾರ ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಆದರೆ ಮುಂಗಾರು ಪ್ರವೇಶವಾಗಬೇಕಾದ ಜೂನ್ ಆರಂಭದಲ್ಲಿ ಇನ್ನೂ ಮಳೆಯಾಗಿಲ್ಲ.











