ಸುಂಟಿಕೊಪ್ಪ ಜೂ.7 NEWS DESK : ಶಾಲಾ-ಕಾಲೇಜು ಮಕ್ಕಳಿಗೆ ರಸ್ತೆ ನಿಯಮಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ತಿಳಿಸಿದರು.
ಸುಂಟಿಕೊಪ್ಪದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ಅವರು, ಮಾದಾಪುರ ರಸ್ತೆಯ ಶಾಲಾ-ಕಾಲೇಜು ಬಿಡುವ ಸಂದರ್ಭ ಶಾಲಾ ಮಕ್ಕಳಿಗೆ ದ್ವಿಚಕ್ರ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು.
ವಾಹನ ಸವಾರರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಆಟೋ ಚಾಲಕರು ಮಿತಿಗಿಂತ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುವುದು ಕಂಡು ಬಂದಲ್ಲ್ಲಿ ಆಟೋಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ದ್ವಿಚಕ್ರ ಸವಾರರು ತಾವು ಹೆಲ್ಮೆಟ್ ಹಾಕುವುದರೊಂದಿಗೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸುವಂತೆ ಸೂಚಿಸುವುದು ಒಳಿತು. ಹಾಗೆಯೇ ಕಾರು ಚಾಲಕರು ಸೀಟು ಬೆಲ್ಟ್ ಹಾಕುವುದರೊಂದಿಗೆ ರಸ್ತೆ ನಿಯಮವನ್ನು ಪಾಲಿಸಿ ಇತರ ಚಾಲಕರಿಗೆ ಮಾದರಿಯಾಗಬೇಕು ಎಂದರು.
ಈ ಸಂದರ್ಭ ಅಪರಾಧ ವಿಭಾಗದ ಎಸ್.ಐ.ನಾಗರಾಜು, ಪೊಲೀಸ್ ಸಿಬ್ಬಂದಿಗಳಾದ ಕೆ.ಆರ್.ಜಗದೀಶ್. ಪ್ರವೀಣ್, ಹೊನ್ನ ರಾಜಪ್ಪ, ಅಭಿಶೇಕ್ ಹಾಗೂ ಶಾಲಾ ಶಿಕ್ಷರು ಹಾಜರಿದ್ದರು.