ಕುಶಾಲನಗರ ಜೂ.15 NEWS DESK : ಕೊಡಗು ಜಿಲ್ಲೆಯ ಕುಶಾಲನಗರದ ಯುವ ಪ್ರತಿಭೆ ನಟಿ ಮಧುರ ಗೌಡ ಅವರು ನಟಿಸಿರುವ ಕನ್ನಡ ಚಲನಚಿತ್ರ ‘ಸಂಭವಾಮಿ ಯುಗೇ ಯುಗೇ’ ಈ ತಿಂಗಳ 21 ರಂದು ಬಿಡುಗಡೆಗೊಳ್ಳಲಿದೆ. ರಾಜ್ಯದಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿರುವ ಮಧುರ ಗೌಡ ನಾಯಕಿಯಾಗಿ ನಟಿಸಿರುವ ಕನ್ನಡ ಚಲನಚಿತ್ರ ಕುಶಾಲನಗರದ ಸಿನಿ ಫ್ಲೆಕ್ಸ್ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮಧುರ ಗೌಡ ಕುಶಾಲನಗರ ನಿವಾಸಿಗಳಾದ ಬೆಳ್ಯನ ಸುರೇಶ್ ಹಾಗೂ ಬಬಿತಾ ದಂಪತಿಗಳ ಪುತ್ರಿ.









