Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಯೋಗ ಸಂಗೀತ, ಮೈಸೂರು ಪರಂಪರೆ ಪುಸ್ತಕ ಬಿಡುಗಡೆ : ಮೂಲ ರೂಪದಲ್ಲೇ ಯೋಗ ಅನುಸರಣೆಯಾಗಲಿ : ಸಂಸದ ಯದುವೀರ್
ಇತ್ತೀಚಿನ ಸುದ್ದಿಗಳು ಕರ್ನಾಟಕ

ಯೋಗ ಸಂಗೀತ, ಮೈಸೂರು ಪರಂಪರೆ ಪುಸ್ತಕ ಬಿಡುಗಡೆ : ಮೂಲ ರೂಪದಲ್ಲೇ ಯೋಗ ಅನುಸರಣೆಯಾಗಲಿ : ಸಂಸದ ಯದುವೀರ್

ಜೂನ್ 22, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮೈಸೂರು ಜೂ.22 NEWS DESK : ಭಾರತೀಯರಾಗಿ ನಾವು ನಮ್ಮ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗವನ್ನು ಅನುಸರಿಸಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಓದುಗ ಪ್ರಕಾಶನ, ಮೈಸೂರು ಕಲ್ಚರಲ್ ಅಸೋಸಿಯೇಷನ್, ಭಾರತೀ ಯೋಗಧಾಮ ಸಹಯೋಗದಲ್ಲಿ ಮೈಸೂರಿನ ಉತ್ತನಹಳ್ಳಿಯ ವಿಜಯಗಿರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
‘‘ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಗೀತ ಮತ್ತು ಯೋಗಕ್ಕೆ ತನ್ನದೇ ಆದ ಪರಂಪರೆ ಇದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 108 ಯೋಗಾಸನಗಳನ್ನು ಪ್ರದರ್ಶಿಸುತ್ತಿದ್ದರು. ಅದೇ ರೀತಿ ಮೈಸೂರಿನ ಯೋಗ ಗುರು ತಿರುಮಲೈ ಕೃಷ್ಣಮಾಚಾರ್ ದೇಶದಾದ್ಯಂತ ಯೋಗ ಪಸರಿಸಿದರು. ಮೂರು ಸಾವಿರಕ್ಕೂ ಹೆಚ್ಚು ಆಸನಗಳನ್ನು ಪರಿಚಯಿಸಿದರು. ಯೋಗದಲ್ಲಿ ದೇಹವನ್ನು ಸಹಜ ಸ್ಥಿತಿಯಿಂದ ಕ್ರಿಯಾಶೀಲತೆಗೆ ಹೇಗೆ ತೆಗೆದುಕೊಂಡು ಹೋಗಬೇಕೆಂಬುದನ್ನು ಹೇಳಿಕೊಟ್ಟಿದ್ದಾರೆ. ಮಾತ್ರವಲ್ಲದೇ ನಾವೆಲ್ಲರೂ ಭಾರತೀಯರಾಗಿ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ,’’ ಎಂದರು.
ಯದುವೀರ್ ಅವರು ರವೀಂದ್ರ ಹೆಗ್ಡೆ ಅವರು ಚಿತ್ರಿಸಿದ ತಮ್ಮದೇ ಕಲಾಕೃತಿಯನ್ನು ಸ್ವೀಕರಿಸಿದರು. ಬಳಿಕ ಪ್ರಕಾಶ್ ಚಿಕ್ಕಪಾಳ್ಯ ಅವರ ಓದುಗ ಪ್ರಕಾಶನ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಯೋಗಧಾಮ ಸಂಸ್ಥಾಪಕ ಡಾ.ಕೆ.ಎಲ್.ಶಂಕರನಾರಾಯಣ ಜೋಯ್ಸ್ ಮಾತನಾಡಿ, ‘‘ಇತ್ತೀಚೆಗೆ ಯೋಗ ಪ್ರವರ್ಧಮಾನಕ್ಕೆ ಬಂದಿರುವುದು ಶ್ಲಾಘನೀಯ ವಿಚಾರವಾಗಿದೆ. ಆದರೆ, ಮೈಸೂರಿನಿಂದ ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಯೋಗವನ್ನು ಮೂಲ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ವಿದೇಶದಲ್ಲಿ ಬಳಕೆಯಾಗುತ್ತಿರುವ ಯೋಗಾಸನಗಳನ್ನು ಗಮನಿಸಿದರೆ ಇದು ನಮ್ಮ ಕೊಡುಗೆಯೇ ಎಂಬ ಅನುಮಾನ ಬರುತ್ತದೆ. ಹಾಗಾಗಿ ಯೋಗವನ್ನು ರೂಪಾಂತರಗೊಳಿಸದೆ ಹಿರಿಯರಿಂದ ಬಳುವಳಿಯಾಗಿ ಬಂದಿರುವ ರೀತಿಯಲ್ಲಿಯೇ ಅದರ ಪರಂಪರೆಯನ್ನು ಮುಂದುವರಿಸಬೇಕು,”ಎಂದು ಸಲಹೆ ನೀಡಿದರು.
‘‘ಕೇವಲ ಆಸನಗಳನ್ನು ಮಾಡುವುದು ಯೋಗವಲ್ಲ. ಸಮಚಿತ್ತದಿಂದ ಅರ್ಧ ಗಂಟೆ ಕುಳಿತುಕೊಳ್ಳುವುದೂ ಆಸನಕ್ಕಿಂತ ಮಿಗಿಲಾದ ಸ್ಥಿತಿಯಾಗಿದೆ. ಕನಸಿನ ಸ್ಥಿತಿ, ಗಾಢವಾದ ನಿದ್ರೆಯನ್ನು ಪ್ರಚೋದಿಸುತ್ತದೆ. ಈ ರೀತಿಯ ಎಲ್ಲಾ ವಿಷಯವನ್ನು ಒಳಗೊಂಡ ಸಮಗ್ರವಾದ ಯೋಗವನ್ನು ಮಕ್ಕಳಿಗೆ ಹೇಳಿಕೊಡಬೇಕಿದೆ,’’ ಎಂದರು.
ಲಕ್ಷ ವೃಕ್ಷ ಆಂದೋಲನದ ರೂವಾರಿ ಎಚ್.ವಿ.ರಾಜೀವ್ ಮಾತನಾಡಿ, ‘‘ಯೋಗ ಉಳಿಸಿದ್ದು ಮೈಸೂರು ಸಂಸ್ಥಾನ. ಇದರಿಂದ ಇಡೀ ವಿಶ್ವವೇ ಯೋಗವನ್ನು ಆಚರಿಸುವಂತಾಗಿದೆ. ಇದರ ಹಿಂದೆ ಸಾವಿರಾರು ಜನರ ತಪಸ್ಸು ಇದೆ,’’ ಎಂದು ಸ್ಮರಿಸಿದರು.
ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ‘‘ಯೋಗ ಪರಂಪರೆಯ ಮೂಲ ಮೈಸೂರು ಆಗಿದ್ದರೂ ಯೋಗವನ್ನು ಸಮಗ್ರವಾಗಿ ಅರ್ಥೈಸುವ ಹಾಗೂ ಅದನ್ನು ಆಚರಿಸುವವರಿಗೆ ಬೇಕಾದ ಮಾಹಿತಿ ನೀಡುವ ಸಮಗ್ರವಾದ ಪುಸ್ತಕದ ಕೊರತೆ ಇದೆ,’’ ಎಂದರು.
ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಓದುಗ ಪ್ರಕಾಶನ ಸಂಸ್ಥೆಯ ಚಿಕ್ಕಪಾಳ್ಯ ಹಾಗೂ ಇತರರು ಇದ್ದರು.
ಎಂ.ವಿ.ಯೋಗಾಸ್‌ನ ಯೋಗಪಟುಗಳು ಕಲಾತ್ಮಕ ಯೋಗವನ್ನು ಮೂರು ವಿಭಾಗಗಳಲ್ಲಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಭಾರತೀ ಯೋಗಧಾಮದ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ:
ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ.ಪಿ.ಎನ್.ಗಣೇಶ್ ಕುಮಾರ್, ಯೋಗ ತಜ್ಞ ಹಾಗೂ ಆಯುರ್ವೇದ ವೈದ್ಯ ಡಾ.ಎ.ಎಸ್.ಚಂದ್ರಶೇಖರ್ ಅವರಿಗೆ ದಿ ಸ್ಟಾರ್ ಆ್ ಯೋಗ ಪ್ರಶಸ್ತಿ, ಅಂತಾರಾಷ್ಟ್ರೀಯ ಯೋಗ ಪಟು ಅಮೂಲ್ಯ, ಅಂಕಿತಾ ಅವರಿಗೆ ದಿ ರೈಸಿಂಗ್ ಸ್ಟಾರ್ ಆ್ ಯೋಗ ಪ್ರಶಸ್ತಿಘಿನೀಡಿ ಗೌರವಿಸಲಾಯಿತು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ : ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.16 NEWS DESK : ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು…

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.