
ವಿರಾಜಪೇಟೆ ಜೂ 22 NEWS DESK : ದೇವಣಗೇರಿ ಬಿ.ಸಿ. ಪ್ರೌಢಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೊಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಆಡಳಿತ ಮಂಡಳಿ ಆಡಳಿತಾಧಿಕಾರಿ ಹಾಗೂ ಯೋಗ ಗುರುಗಳಾದ ಪಿ.ಎ. ಲಕ್ಷ್ಮಿ ನಾರಾಯಣ ಮಾತನಾಡಿ, ಯೋಗ ಎಂದರೆ ಆಸನ ಅಲ್ಲ, ಅದೊಂದು ಜೀವನ ಪದ್ಧತಿ, ಇದರ ಮೂಲ ಪುರುಷ ಪತಂಜಲಿಯವರು ಎಂದರಲ್ಲದೆ ಯೋಗದಿಂದ ಆಗುವ ಹಲವಾರು ಉಪಯೋಗ, ಯೋಗದಿಂದ ಶರೀರದ ಆರೋಗ್ಯ, ಮಾನಸಿಕ ಆರೋಗ್ಯ, ಭಾಷೆಯ ಶುದ್ಧತೆ, ವಿದ್ಯಾರ್ಥಿಗಳು ಯೋಗವನ್ನು ಕಲಿತರೆ ಆಗುವ ಉಪಯೋಗವನ್ನು ತಿಳಿಸಿದರು.
ಪ್ರತಿದಿನ ಯೋಗವನ್ನು ಮಾಡುವಂತೆ ಸಲಹೆ ನೀಡಿದ ಅವರು, ವಿದ್ಯಾರ್ಥಿಗಳು ತಾವೂ ಕಲಿತು ಇತರರರಿಗೂ ಕಲಿಸುವಂತೆ ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬೀನಂಡ ಎಸ್.ಪೂಣಚ್ಚ, ಆರೋಗ್ಯವಂತ ಜೀವನ ನಡೆಸಲು ಯೋಗ ತುಂಬಾ ಸಹಕಾರಿ. ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗಾಭ್ಯಸ ಮಾಡುವಂತೆ ಸಲಹೆ ನೀಡಿದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಂ.ನಾಣಯ್ಯ ಮಾತನಾಡಿ, ಯೋಗದ ಮಂತ್ರದೊಂದಿಗೆ ಹಲವಾರು ಆಸನಗಳನ್ನು ಮಾಡುತ್ತಾ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಡಿ.ಲೋಕೇಶ್, ಶಿಕ್ಷಕರಾದ ಪ್ರಮೀಳಾ ಕುಮಾರಿ, ಎಸ್.ನಂದಿನಿ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಇದ್ದರು.








