
ನಾಪೋಕ್ಲು ಜೂ.24 NEWS DESK : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ವಾರ್ಷಿಕ ಮಾಹಿತಿ ಕಾರ್ಯಾಗಾರ ನಡೆಯಿತು.
ಮಡಿಕೇರಿಯ ಜ್ಞಾನ ವಿಕಾಸ ಕೇಂದ್ರದ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಉದ್ಘಾಟಿಸಿ, ಜ್ಞಾನ ವಿಕಾಸ ಕೇಂದ್ರದ ಧ್ಯೇಯವೋದ್ದೇಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಜ್ಞಾನ ವಿಕಾಸ ಕೇಂದ್ರದ ಯೋಜನಾಧಿಕಾರಿ ಪುರುಷೋತ್ತಮ, ಅರಕಲಗೋಡು ತಾಲ್ಲೂಕಿನ ಸಮನ್ವಯಧಿಕಾರಿ ಸಪ್ನಾ, ಮಡಿಕೇರಿ ತಾಲ್ಲೂಕಿನ ಸಮನ್ವಯಧಿಕಾರಿ ಮಾಲಿನಿ ಹಾಗೂ ಎಲ್ಲಾ ತಾಲ್ಲೂಕಿನ ಸೇವಾಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.








