
ಸೋಮವಾರಪೇಟೆ ಜೂ.24 NEWS DESK : ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನವದುರ್ಗಾ ಚಂಡಿಕಾ ಹೋಮ, ಮತ್ತು ಏಕಾದಶ ರುದ್ರಹೋಮ ನಡೆಯಿತು. ವೇದಬ್ರಹ್ಮ ಎಂ.ವಿ.ಕೃಷ್ಣಮೂರ್ತಿ ಘನಪಾಠಿಗಳು ಹಾಗೂ ಚಿತ್ರಕುಮಾರ್ ಭಟ್ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.
ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಕಾರ್ಯದರ್ಶಿ ಎಸ್.ಡಿ.ವಿಜೇತ್ ಪದಾಧಿಕಾರಿಗಳಾದ ವೈ.ಪಿ.ಹರೀಶ್, ಸಿ.ಎನ್.ಸತೀಶ್, ಶಾಮ್ ಸುಂದರ್, ರಾಜೇಶ್ ಪದ್ಮನಾಭ, ಸುದರ್ಶನ್ ಕೌಶಿಕ್, ಜಯಂತ್, ಇನ್ನಿತರರು ಇದ್ದರು.
ಇಂದು (ಜೂ.24) ಅಮೃತಮನೋತ್ಸವ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಸದ ಯದುವೀರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕ ಡಾ.ಮಂತರ್‍ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.







