
ಸುಂಟಿಕೊಪ್ಪ ಜೂ.24 NEWS DESK : ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲ್ಲಿರುವ ದುರ್ಗಾಲಕ್ಷ್ಮಿ ದೇವಿಯ ಪಾದುಕ ಪೂಜೆ ದೇವಾಲಯದ ಆವರಣದಲ್ಲಿ ಶ್ರದ್ಧಾಭಕತಿಯಿಂದ ಜರುಗಿತು.
ದೇವಾಲಯದ ಪ್ರಧಾನ ಆರ್ಚಕರಾದ ಗಣೇಶ್‍ಭಟ್ ನೇತೃತ್ವದಲ್ಲಿ ಸ್ಥಳ ಶುದ್ಧಿಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಾಸ್ತು ಶಿಲ್ಪಿ ಜಗ್ಗನಿವಾಸುದೇವ್ ಅವರು ದೇವಿಯ ಪಾದುಕೆಕಲ್ಲನ್ನು ದೇವಸ್ಥಾನ ಆಡಳಿತ ಮಂಡಳಿಗೆ ಒಪ್ಪಿಸಿ ಅದಕ್ಕೆ ಶುದ್ಧಿಪೂಜೆಯನ್ನು ಸಲ್ಲಿಸುವ ಮೂಲಕ ಗುಡಿಯ ನಿರ್ಮಾಣಕ್ಕೆ ಚಾಲನೆ ನೀಡಿದರು.
ಅಂದಾಜು ರೂ.18 ರಿಂದ 20 ಲಕ್ಷ ವೆಚ್ಚದಲ್ಲಿ ದುರ್ಗಾಲಕ್ಷ್ಮಿಗುಡಿ, ನಾಗಗುಡಿ, ಮುಖಮಂಟಪ ಹಾಗೂ ಮಹಾದ್ವಾರದ ಕಾಮಗಾರಿಯು ತ್ವರಿತಗತಿಯಲ್ಲಿ ಆರಂಭಿಸಲಾಗಿದ್ದು, ದಾನಿಗಳು ಹಾಗೂ ಭಕ್ತಾಧಿಗಳು ಧನಸಹಾಯ ನೀಡುವಂತೆ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದ ಅಧ್ಯಕ್ಷ ಬಿ.ಎಂ.ಸುರೇಶ್ ಮನವಿ ಮಾಡಿದರು.
ಈ ಗುಡಿಗಳ ನಿರ್ಮಾಣ ಕಾರ್ಯವನ್ನು ದಕ್ಷಿಣ ಕನ್ನಡ ಮಾಣಿಯ ಶಿಲ್ಪಕಾರರಾದ ಕೃಷ್ಣಪ್ರಸಾದ್, ಜಗದೀಶ್ ದಯಾನಂದ್ ವಹಿಸಿಕೊಂಡಿದ್ದರು.
ದೇವಾಲಯದ ಪದಾಧಿಕಾರಿಗಳಾದ ಚಂದ್ರ, ಧನುಕಾವೇರಪ್ಪ, ಸಿ.ಬಿ.ಚಂದ್ರಶೇಖರ್, ಬಾಲಕೃಷ್ಣ, ಆರ್.ಶಾಂತರಾಂ ಕಾಮತ್, ವಿ.ಎ.ಸಂತೋಷ್, ವಿನೋದ್, ಶಶಿಕುಮಾರ್, ದೀನುದೇವಯ್ಯ, ಪಿ.ಆರ್.ಸುನಿಲ್‍ಕುಮಾರ್ ಸೇರಿದಂತೆ ಇತರರು ಇದ್ದರು.








