
ಮಡಿಕೇರಿ ಜೂ.24 NEWS DESK : ಜಮಾಅತೆ ಇಸ್ಲಾಮೀ ಹಿಂದ್ ನೂತನ ಕೊಡಗು ಸಂಚಾಲಕರಾಗಿ ಸಿ.ಹೆಚ್.ಅಫ್ಸರ್ ಆಯ್ಕೆಯಾಗಿದ್ದಾರೆ.
ಹುಣಸೂರಿನಲ್ಲಿ ನಡೆದ ಮೈಸೂರು ವಲಯ ಹೊಣೆಗಾರರ ಸಭೆಯಲ್ಲಿ ವಲಯಕ್ಕೆ ಓರ್ವ ಕಾರ್ಯದರ್ಶಿಯನ್ನು ನೇಮಕಗೊಳಿಸಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ, ಹಾಸನದಲ್ಲಿ ನಡೆದ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ನೂತನ ಕೊಡಗು ಜಿಲ್ಲಾಸಂಚಾಲಕರಾಗಿ ಸಿ.ಹೆಚ್.ಅಫ್ಸರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮೈಸೂರು ವಲಯ ಸಂಚಾಲಕ ಯು.ಅಬ್ದುಲ್ ಸಲಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸಿ.ಹೆಚ್.ಅಫ್ಸರ್ಪ್ರಸ್ತುತ ಜಮಾಅತೆ ಇಸ್ಲಾಮೀ ಹಿಂದ್ ಮಡಿಕೇರಿ ಸ್ಥಾನಿಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಸೂರು ವಲಯ ಕಾರ್ಯದರ್ಶಿಯಾಗಿ ವಿರಾಜಪೇಟೆಯ ಪಿ.ಕೆ.ಅಬ್ದುಲ್ ರೆಹಮಾನ್ ಅವರನ್ನು ಮೈಸೂರು ವಲಯ ಹೊಣೆಗಾರರ ಸಲಹೆಯ ಮೇರೆಗೆ ಆಯ್ಕೆ ಮಾಡಲಾಗಿದೆ.







