
ಮೂರ್ನಾಡು ಜೂ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರಾಜಪೇಟೆ ತಾಲೂಕಿನ ಕಾಂತೂರು-ಮೂರ್ನಾಡು ವಲಯದ ಹೊದ್ದೂರು, ವಾಟೆಕಾಡು ಮತ್ತು ಮರಗೋಡುವಿನ ಶೌರ್ಯವಿಪತ್ತು ನಿರ್ವಹಣಾ ತಂಡದ ವತಿಯಿಂದ ವಾಟೆಕಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳು ಸ್ವಚ್ಛತಾ ಶ್ರಮದಾನ ನಡೆಯಿತು.
ಹೊದ್ದೂರು ವಾಟೇಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡ-ಗಂಟೆಗಳನ್ನು ಕಡಿದು ಸ್ವಚ್ಚಗೊಳಿಸುವುದರ ಮೂಲಕ ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಪ್ರತಾಪ್, ಸೇವಾಪ್ರತಿನಿಧಿಗಳಾದ ಕಾವೇರಿ, ಲತಾ ಮತ್ತು ದಿವ್ಯ, ಜನಜಾಗೃತಿ ವೇದಿಕೆ ಸದಸ್ಯ ಸುಬ್ರಮಣ್ಯ, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಬಿ.ಪಿ.ಸುನಂದಿನಿ, ಹೊದ್ದೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಕುಸುಮ, ಹೊದ್ದೂರು ಗ್ರಾ.ಪಂ ನ್ಯಾಯ ಸಮಿತಿಯ ಅಧ್ಯಕ್ಷ ಮೊಣ್ಣಪ್ಪ, ಹೊದ್ದೂರು ವಾಟೇಕಾಡು ಮತ್ತು ಮರಗೋಡುವಿನ ಶೌರ್ಯವಿಪತ್ತು ನಿರ್ವಹಣಾ ತಂಡದ 26 ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಶ್ರಮದಾನದ ನಂತರ ಎರಡು ಶೌರ್ಯ ಘಟಕದ ಮಾಸಿಕಸಭೆಯನ್ನು ಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು.
ವರದಿ : ಟಿ.ಸಿ.ನಾಗರಾಜ್, ಮೂರ್ನಾಡು








