ಮಡಿಕೇರಿ ಜೂ.27 NEWS DESK : ನಿರಂತರ ಮಳೆಯಿಂದಾಗಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಶಾಲೆಯ ಹಿಂಭಾಗದ ಗುಡ್ಡದ ಮಣ್ಣು ಕುಸಿದು ಶಾಲೆಯ ಗೋಡೆ ಮತ್ತು ಕಿಟಕಿಗೆ ಹಾನಿಯಾಗಿದೆ.
ದೊಡ್ಡ ದೊಡ್ಡ ಕಲ್ಲು ಸಹಿತ ಮಣ್ಣು ಬಂದ ರಭಸಕ್ಕೆ ಶಾಲೆಯ ಗೋಡೆಯ ಒಂದು ಭಾಗ ಮತ್ತು ಕಿಟಕಿಯೊಂದು ಬಿದ್ದಿದೆ. ತರಗತಿಯೊಳಗೆ ಗೋಡೆ, ಗುಡ್ಡದ ಮಣ್ಣು ಮತ್ತು ಕಲ್ಲು ಬಿದ್ದಿದ್ದು, ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.
::: ದುಬಾರೆಯಲ್ಲಿ ನಿರ್ಬಂಧ :::
ಕೊಡಗು ಜಿಲ್ಲೆಯ ಹೆಸರುವಾಸಿ ಪ್ರವಾಸಿತಾಣ ದುಬಾರೆ ಭಾಗದಲ್ಲಿ ನಿರಂತರ ಮಳೆಯಿಂದ ನದಿ ತುಂಬಿ ಹರಿಯುತ್ತಿದೆ. ಮುಂಜಾಗೃತಾ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ರ‍್ಯಾಫ್ಟಿಂಗ್ ಜಲಕ್ರೀಡೆಯನ್ನು ಮಳೆಯ ಕಾರಣ ಈಗಾಗಲೇ ಸ್ಥಗಿತಗೊಳಿಸಲಾಗಿದೆ.