

ಟಿ.ಶೆಟ್ಟಿಗೇರಿ ಜೂ.28 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಕಾರ್ಯಕರ್ತರು ಟಿ.ಶೆಟ್ಟಿಗೇರಿ ಶ್ರೀ ಕೊರಕೋಟು ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರಭು ಸುಬ್ಬಯ್ಯ, ಹಿರಿಯ ಮುಖಂಡ ಅಪ್ಪಚಂಗಡ ಪಿ.ಮೋಟಯ್ಯ, ಟಿ .ಶೆಟ್ಟಿಗೇರಿ ಪಂಚಾಯಿತಿ ಮಾಜಿ ಅಧ್ಯಕ್ಷ ಪೆಮ್ಮಂಡ ರಾಜ ಕುಶಾಲಪ್ಪ, ಆಲೆಮಾಡ ಸೋಮಣ್ಣ, ತೀತಿರ ದೊರೆ ಗಣಪತಿ ಮತ್ತು ಹಲವಾರು ಕಾರ್ಯಕರ್ತರು ಪೊನ್ನಣ್ಣ ಅವರು ಜನಪರ ಕೆಲಸಗಳಿಗೆ ಮತ್ತಷ್ಟು ಮತ್ತಷ್ಟು ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸಿದರು. ಶ್ರೀ ಅಯ್ಯಪ್ಪ ದೇವಾಲಯದ ಅರ್ಚಕ ವಸಂತ ಪೂಜೆ ನೆರವೇರಿಸಿದರು.








