
ಸುಂಟಿಕೊಪ್ಪ ಜೂ.28 NEWS DESK : 7ನೇ ಹೊಸಕೋಟೆ ಯುವಕನೋರ್ವ ಸೈಕಲ್ ಮೂಲಕ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
7ನೇ ಹೊಸಕೋಟೆಯ ನಿವಾಸಿ ಪ್ರಶಾಂತ್ ಬೈಸಿಕಲ್ ಮೂಲಕ ಸಂಚರಿಸಿ ರಾಜ್ಯದ 31 ಜಿಲ್ಲೆಗಳಿಗೆ 26 ದಿನಗಳಲ್ಲಿ ತೆರಳಿ ಪ್ರತೀ ಜಿಲ್ಲೆಯಲ್ಲಿ ಒಂದೊಂದು ಗಿಡವನ್ನು ನೆಡುವ ಮೂಲಕ ನೆಲ-ಜಲ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಶಾಂತ್ 7ನೇ ಹೊಸಕೋಟೆ ಗ್ರಾಮದ ಸುರೇಶ ಹಾಗೂ ಉಷಾ ದಂಪತಿಗಳ ಪುತ್ರ. 







