ಮಡಿಕೇರಿ ಜೂ.29 NEWS DESK : ಸಿದ್ದಾಪುರ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಜು.1 ರಂದು ಕಕ್ಕಬ್ಬೆ ಜಂಕ್ಷನ್ನಲ್ಲಿ ಬೆಳಿಗ್ಗೆ 10.30 ಗಂಟೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಕಕ್ಕಬ್ಬೆ, ಕುಂಜಿಲ, ಯವಕಪಾಡಿ, ನಾಲಡಿ ಸುತ್ತಮುತ್ತಲಿನ ಎಲ್ಲಾ ಕೊಡವ ಮತ್ತು ಕೊಡವತಿಯರು ಮಾನವ ಸರಪಳಿಯಲ್ಲಿ ಭಾಗವಹಿಸಿ ಪವಿತ್ರ ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಪಣತೊಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕೃಷಿ ಭೂಮಿಯನ್ನು ವಾಣಿಜ್ಯ ದುರುದ್ದೇಶವನ್ನಾಗಿ ಪರಿವರ್ತಿಸಲು ನಮ್ಮ ಪ್ರಾಚೀನ ಭೂಮಿ ಮತ್ತು ದೀರ್ಘಕಾಲಿಕ ಜಲಮೂಲಗಳನ್ನು ಲೂಟಿ ಮಾಡಲಾಗುತ್ತಿದೆ. ಇದು ಸ್ಥಳೀಯ ಕೊಡವರ ಅಸ್ಮಿತೆ, ಅಸ್ತಿತ್ವ ಮತ್ತು ಕೊಡವ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ಆರೋಪಿಸಿದ್ದಾರೆ.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ವಿಪತ್ತನ್ನು ಜಯಿಸಲು ಇರುವ ಏಕೈಕ ದಿವ್ಯೌಷಧ, ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ನಮ್ಮ ಕೊಡವ ತಾಯಿ ನೆಲದಲ್ಲಿ ಸ್ವಯಂ ನಿರ್ಣಯದ ಹಕ್ಕುಗಳನ್ನು ಹೊಂದಿರಬೇಕು. ವಿಶ್ವ ರಾಷ್ಟ್ರಸಂಸ್ಥೆ ಆದಿಮಸಂಜಾತ ಕೊಡವ ಜನರ ಹಕ್ಕುಗಳನ್ನು ಸಂರಕ್ಷಿಸಲು ವಿಶೇಷ ವಿಧಿವಿಧಾನಗಳನ್ನು ಕಲ್ಪಿಸಲಾಗಿದೆ, ಭಾರತದ ಸಾರ್ವಭೌಮತ್ವ ಮತ್ತು ಪರಮಾಧಿಕಾರದಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು, ಆರ್ಟಿಕಲ್ 244, 371 ಆರ್/ಡಬ್ಲ್ಯೂ ನಮ್ಮ ಸಂವಿಧಾನದ 6ನೇ ಮತ್ತು 8ನೇ ಶೆಡ್ಯೂಲ್, ಅಡಿಯಲ್ಲಿ ಸ್ವಯಂ ಆಳ್ವಿಕೆ ಮತ್ತು ಕೊಡವ ಬುಡಕಟ್ಟಿನ ಎಸ್ಟಿ ಟ್ಯಾಗ್ ಅನ್ನು ಪಾಲಿಸುವ ಮೂಲಕ ರಕ್ಷಿಸಬೇಕಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ರೆಸಾರ್ಟ್ ದೊರೆಗಳು, ಕಾರ್ಪೊರೇಟ್ ವಲಯಗಳು, ಆರ್ಥಿಕ ಅಪರಾಧಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಅನಿವಾಸಿ ಭಾರತೀಯ ಉದ್ಯಮಪತಿಗಳು, ರಿಯಾಲ್ ಎಸ್ಟೆಟ್ ಧಣಿಗಳು, ಭ್ರಷ್ಟ ಅಧಿಕಾರಿಗಳು, ಹವಾಲಾ ದಂಧೆಕೋರರು, ಕಾಳಸಂತೆ ವ್ಯಾಪಾರಸ್ಥರು, ರಾಜಕಾರಣಿಗಳೊಂದಿಗೆ ಮೈತ್ರಿ ಹೊಂದಿರುವವರು ಕಾವೇರಿ ಜಲಾನಯನ ಪ್ರದೇಶದ ದೊಡ್ಡ ಪ್ರಮಾಣದ ಪ್ರಾಚೀನ ಭೂಮಿಯನ್ನು ವಿಲೇವಾರಿ ಮತ್ತು ಪರಿವರ್ತನೆ ನಡೆಸಿ ಟೌನ್ಶಿಪ್ಗಳು ದೈತ್ಯಾಕಾರದ ವಿಲ್ಲಾಗಳು, ಬೃಹತ್ ಮಹಲುಗಳು ಮತ್ತು ಮನೆಗಳನ್ನು ನಿರ್ಮಿಸುತ್ತಿದ್ದಾರೆ.
ಡಾ.ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಕೃಷಿ ಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸು ಮಾಡಿದ್ದಾರೆ. ಲಭ್ಯವಿರುವ ಕೃಷಿ ಭೂಮಿಯ ಪ್ರಮಾಣ ಕಡಿಮೆಯಾದಂತೆ, ಗ್ರಾಹಕರಿಗೆ ಲಭ್ಯವಿರುವ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ, ಜನಸಂಖ್ಯೆಯಲ್ಲಿನ ಆರೋಗ್ಯದ ಮಟ್ಟಕ್ಕೂ ಹೊಡೆತ ಬೀಳುತ್ತದೆ ಎಂದು ಪ್ರತಿಪಾಧಿಸಿದ್ದು, ಇದನ್ನು ಸರ್ಕಾರ ಗಾಳಿಗೆ ತೂರಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.
ಸರ್ಕಾರ ಅದರ ಮೂಲಭೂತ ಕರ್ತವ್ಯಗಳಲ್ಲಿ ವಿಫಲವಾಗಿದೆ, ಆರ್ಟಿಕಲ್ 51(A), 51A (f) – ನಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು, 51A(g)-ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡಂತೆ ನೈಸರ್ಗಿಕ ಆರ್ಥಿಕತೆಯನ್ನು ಮೌಲ್ಯೀಕರಿಸಲು, ರಕ್ಷಿಸಲು ಮತ್ತು ಸುಧಾರಿಸಲು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು.
51A(h)-ವೈಜ್ಞಾನಿಕ ಮನೋಭಾವ, ಮಾನವತಾವಾದ, ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಲು.
ಭಾರತೀಯ ಸಂವಿಧಾನದ 51ನೇ ವಿಧಿ, ಮೂಲಭೂತ ಕರ್ತವ್ಯಗಳನ್ನು ಭಾಗದ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಭಾರತೀಯ ಸಂವಿಧಾನದ Iಗಿಂ. ಕೊಡವ ತಾಯ್ನಾಡು, ನಮ್ಮ ಭೂ-ತಾಯಿ ನೆಲ, ಜಲ ಸಂಪತ್ತು, ನದಿಗಳು, ಪ್ರಕೃತಿ ದೇವಿ, ಕೊಡವ ಬುಡಕಟ್ಟು ಜನಾಂಗ, ಸಮರ ಲಕ್ಷಣ, ಯೋಧ, ಕೃಷಿ ಬದ್ಧತೆ, ಪ್ರಾಣಿಗಳು, ಸಸ್ತನಿಗಳು, ಪಕ್ಷಿಗಳು, ಸಸ್ಯ ಮತ್ತು ಪ್ರಾಣಿಗಳಂತಹ ಜೈವಿಕ ವೈವಿಧ್ಯತೆ, ಪರ್ವತಗಳು, ತೊರೆಗಳು ಮತ್ತು ಜಲಪಾತಗಳು ನಮ್ಮ ಜಾನಪದ ಗೀತೆ ಬಾಳೋಪಾಟ್ನಲ್ಲಿ ಹೃದಯಂಗಮವಾಗಿ ಚಿತ್ರಿಸಲಾಗಿದೆ ಎಂದು ನಾಚಪ್ಪ ಹೇಳಿದ್ದಾರೆ.