ಬೆಂಗಳೂರು ಜು.6 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿದರು.
ಗೃಹ ಸಚಿವರಾದ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾದ ತಂತ್ರಾಂಶಗಳು ಮತ್ತು ಕೈಪಿಡಿಗಳು ಹೀಗಿವೆ:
*ಸೀನ್ ಆಫ್ ಕ್ರೈಂ ಕೈಪಿಡಿ
*ಸಂಚಯ: ಹೊಸ ಕ್ರಿಮಿನಲ್ ಕಾನೂನುಗಳ ಡಿಜಿಟಲ್ ತಂತ್ರಾಂಶ, ಆ್ಯಪ್ ಬಿಡುಗಡೆ
*ರಿಯಲ್ ಟೈಂ ಟ್ರಾಕಿಂಗ್ ಆಫ್ ಹೊಯ್ಸಳ ತಂತ್ರಾಂಶ
*ಬೆಂಗಳೂರು ಸಿಟಿ ಪೊಲೀಸ್- ಸೇಫ್ ಕನೆಕ್ಟ್ (ಕಮಾಂಡ್ ಸೆಂಡರ್ ಜೊತೆಗೆ ನೊಂದವರು ಆಡಿಯೊ, ವಿಡಿಯೊ ಕಾಲ್ ಮೂಲಕ ಸಂಪರ್ಕ ಸಾಧಿಸುವ ಸಾಧನ)
*ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (ಸೈಬರ್ ಕ್ರೈಂ ಕೈಪಿಡಿ)