Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
  • *ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*
  • *ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*
  • *ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*
  • *ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*
  • *ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*
  • *ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೋಟರಿ ವುಡ್ಸ್ ನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಪದಗ್ರಹಣ : ಸಮಾಜಸೇವಾ ಕಾಯ೯ಗಳಿಗೆ ರೋಟರಿ ಸಂಸ್ಥೆ ಪ್ರೇರಣೆ ನೀಡುತ್ತದೆ : ಡಾ.ಕೇಶವ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೋಟರಿ ವುಡ್ಸ್ ನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಪದಗ್ರಹಣ : ಸಮಾಜಸೇವಾ ಕಾಯ೯ಗಳಿಗೆ ರೋಟರಿ ಸಂಸ್ಥೆ ಪ್ರೇರಣೆ ನೀಡುತ್ತದೆ : ಡಾ.ಕೇಶವ್*

ಜುಲೈ 8, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.8 NEWS DESK : ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಜಗದಗಲ ಖ್ಯಾತಿ ಗಳಿಸಿರುವ ರೋಟರಿ ಸಂಸ್ಥೆಯು ನಾಯಕತ್ವ ಗುಣ ಬೆಳೆಸಲು ನೆರವಾಗುವುದರೊಂದಿಗೆ ಸದಸ್ಯರಲ್ಲಿರುವ ಪ್ರತಿಭೆಯ ಅನಾವರಣಕ್ಕೂ ವೇದಿಕೆಯಾಗಿ ಸಮಾಜ ಸೇವೆಗೆ ಪ್ರೇರಪಣೆ ನೀಡುತ್ತದೆ ಎಂದು ಸುಳ್ಯ ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವನ೯ರ್ ಡಾ. ಪಿ.ಕೆ.ಕೇಶವ್ ಹೇಳಿದ್ದಾರೆ.

ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ ನ ನೂತನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಮತ್ತು ಕಾಯ೯ದಶಿ೯ಯಾಗಿ ಕಿರಣ್ ಕುಂದರ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಮಾತನಾಡಿದ ಡಾ. ಪಿ.ಕೆ.ಕೇಶವ್, ಸರಿಯಾದ ವೇದಿಕೆಗಳು ದೊರಕದೇ ಇದ್ದಾಗ ಅಸಾಮಾನ್ಯ ವ್ಯಕ್ತಿ ಕೂಡ ಸಾಮಾನ್ಯನಾಗಿಬಿಡುತ್ತಾನೆ, ರೋಟರಿಯಂಥ ನಾಯಕತ್ವ ಬೆಳೆಸುವ ಸಂಸ್ಥೆಗಳು ಅಸಮಾನ್ಯ ವ್ಯಕ್ತಿತ್ವದವರೊಂದಿಗೆ ಸಾಮಾನ್ಯನನ್ನೂ ಅಸಮಾನ್ಯ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ರೋಟರಿಯಂಥ ಸೇವಾ ಸಂಸ್ಥೆಗಳಲ್ಲಿ ಸೇಪ೯ಡೆಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಹೇಗೆ ಎಲ್ಲಾ ಆಟಗಾರರ ಸಾಮಥ್ಯ೯ ಬಳಸಿಕೊಂಡು ಗೆಲುವಿನ ಜಯಭೇರಿ ಕಂಡಿದೆಯೋ ಅಂತೆಯೇ ರೋಟರಿ ಸಂಸ್ಥೆ ಕೂಡ ತನ್ನಲ್ಲಿನ ಎಲ್ಲಾ ಸದಸ್ಯರ ಪ್ರತಿಭೆಯನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕೆಂದು ಕೇಶವ್ ಆಶಿಸಿದರು.

ಜೀವನದಲ್ಲಿ ಒಂದು ಹಂತದವರೆಗೆ ಸಂಪತ್ತು, ಕೀತಿ೯ ಸಂಪಾದನೆ ಮಾಡಬೇಕು, ಆದರೆ ಇವೆಲ್ಲಾ ದೊರಕಿದ ಮೇಲೆಯೂ ಸಮಾಧಾನ ದೊರಕದೇ ಹೋದಾಗ ಸಾಮಾಜಿಕ ಸೇವೆಗೆ ಮುಂದಾದರೆ ಮಾತ್ರ ಮಾನಸಿಕ ನೆಮ್ಮದಿ ದೊರಕುತ್ತದೆ. ರೋಟರಿಯ ಸೇವಾ ಕಾಯ೯ಗಳು ಈ ಸಂಸ್ಥೆಯ ಸದಸ್ಯರಿಗೆ ಬೇರೆಲ್ಲೂ ದೊರಕದ ಮಾನಸಿಕ ಸಂತೋಷ ಮತ್ತು ನೆಮ್ಮದಿಯನ್ನು ದೊರಕಿಸಿಕೊಡುತ್ತದೆ ಎಂದೂ ಡಾ. ಕೇಶವ್ ಹೇಳಿದರು.

ಈ ರೋಟರಿ ವಷ೯ದ ಸಂದೇಶವಾದ ಮ್ಯಾಜಿಕ್ ಆಫ್ ರೋಟರಿ ಮೂಲಕ ರೋಟರಿಯ ಸೇವಾ ಕಾಯ೯ಗಳು ಜನರ ಜೀವನದಲ್ಲಿ ಉಂಟು ಮಾಡುತ್ತಿರುವ ಮ್ಯಾಜಿಕ್ ನಂಥ ಅದ್ಬುತವನ್ನು ಜನರಿಗೆ ತಲುಪಿಸಬೇಕೆಂದೂ ಕೇಶವ್ ನುಡಿದರು, ಸಮಾಜದ ವಿವಿಧ ವಗ೯ಗಳ ಜನರಿಗೆ, ಅಗತ್ಯವುಳ್ಳವರಿಗೆ ರೋಟರಿಯು 119 ವಷ೯ಗಳಿಂದ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆ, ಕೊಡುಗೆಗಳನ್ನು ತಿಳಿಸುತ್ತಲೇ, ಹೊಸ ಸದಸ್ಯರನ್ನು ರೋಟರಿಗೆ ಸೇಪ೯ಡೆಗೊಳಿಸಲು ಸೂಕ್ತ ಸಮಯ ಇದಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ಕಿರಣ್ ಮಾತನಾಡಿ, ಈ ರೋಟರಿ ವಷ೯ದಲ್ಲಿ ಅಂಗನವಾಡಿಗಳಿಗೆ ಕಾಯಕಲ್ಪ, ಸಂಚಾರ ಮತ್ತು ಮಾದಕ ವ್ಯಸನದ ಜಾಗೃತಿ ಬಗ್ಗೆ ಕಾಯ೯ಕ್ರಮ ಸೇರಿದಂತೆ 9 ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ರೋಟರಿ ಸಂಸ್ಥೆಗಳು ಮುಂದಾಗಿದೆ ಎಂದು ಹೇಳಿದರು.

ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ 3 ವಷ೯ಗಳ ಹಿಂದೆ ಪ್ರಾರಂಭಿಸಿದ ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾದ ರೋಟರಿ ವುಡ್ಸ್ ಸಮಾಜ ಸೇವೆಯಲ್ಲಿ ಸಾಥ೯ಕತೆಯೊಂದಿಗೆ ಜನರ ಮನಗೆದ್ದಿದೆ ಎಂದು ಶ್ಲಾಘಿಸಿದರು.

ರೋಟರಿ ವುಡ್ಸ್ ನೂತನ ಅಧ್ಯಕ್ಷ ಹರೀಶ್ ಕಿಗ್ಗಾಲು, ಈ ವಷ೯ದಲ್ಲಿ ಅನೇಕ ವಿಭಿನ್ನ ಕಾಯ೯ಕ್ರಮಗಳ ಮೂಲಕ ಸಾಮಾಜಿಕ ಸೇವಾ ಕಾಯ೯ಗಳನ್ನು ನಿರಂತರವಾಗಿಸುವುದಾಗಿ ಭರವಸೆ ನೀಡಿದರು.

ಇದೇ ಸಂದಭ೯ ಜಾದೂಗಾರ ವಿಕ್ರಂಶೆಟ್ಟಿ ಮ್ಯಾಜಿಕ್ ಮೂಲಕ ಬುಟ್ಟಿಯೊಳಗಿನಂದ ರೋಟರಿ ವುಡ್ಸ್ ನ ವಾತಾ೯ ಸಂಚಿಕೆ ಅನಾವರಣಗೊಳಿಸಿ ಗಮನ ಸೆಳೆದರು.

ರೋಟರಿ ವುಡ್ಸ್ ವತಿಯಿಂದ ಮಡಿಕೇರಿಯ ಅಡುಗೆ ಅನಿಲ ಸಿಲಿಂಡರ್ ವಿತರಕರಾದ ಮಂಜುನಾಥ್, ಸುರೇಶ್, ಇಫಾ೯ನ್, ಉನೈಜ್ , ವಜೀರ್, ಪೀಟರ್, ಇಮ್ರಾನ್ ಅವರುಗಳನ್ನು ಸನ್ಮಾನಿಸಲಾಯಿತು. ರೋಟರಿ ವುಡ್ಸ್ ನ ಗೌರವ ಸದಸ್ಯರಾಗಿ ಅರಣ್ಯಾಧಿಕಾರಿ ಮಯೂರ್, ಸದಸ್ಯರಾಗಿ ಕೆ, ರವಿ ಮತ್ತು ಪವನ್ ವಸಿಷ್ಟ ಸೇಪ೯ಡೆಯಾದರು,

ರೋಟರಿ ವುಡ್ಸ್ ನಿಗ೯ಮಿತ ಅಧ್ಯಕ್ಷ ವಸಂತ್ ಕುಮಾರ್ ತನ್ನ ಅವಧಿಯ ಸೇವಾ ಕಾಯ೯ಗಳ ಮಾಹಿತಿ ನೀಡಿದರು, ರೋಟರಿ ವುಡ್ಸ್ ಕಾಯ೯ದಶಿ೯ ಕಿರಣ್ ಕುಂದರ್ ವಂದಿಸಿದ ಕಾಯ೯ಕ್ರಮದಲ್ಲಿ ರೋಟರಿ ವಲಯ 6 ರ ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಮಾ.28 NEWS DESK : ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದ ಬಳಿಯ ಪೊಲೀಸ್ ವಸತಿ ಗೃಹ ಸಮುಚ್ಚಯ…

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026

*ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*

ಮಾರ್ಚ್ 28, 2026

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026

*ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಮಾರ್ಚ್ 28, 2026

*ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*

ಮಾರ್ಚ್ 28, 2026

*ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮಾರ್ಚ್ 28, 2026

*ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*

ಮಾರ್ಚ್ 28, 2026

*ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*

ಮಾರ್ಚ್ 28, 2026

*ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ : ಭಾರತದ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಅಗತ್ಯ : ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಮತ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.