
ಮಡಿಕೇರಿ ಸೆ.12 NEWS DESK : ವಿಶ್ವದ ಅತಿ ದೊಡ್ಡ ಕೌಶಲ್ಯ ಹಬ್ಬ ವಲ್ರ್ಡ್ ಸ್ಕಿಲ್ಸ್ ಸ್ಫರ್ಧೆಯು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ವೃತ್ತಿಪರ ಕೌಶಲ್ಯ ಸ್ಪರ್ಧೆ ಆಗಿದೆ. ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ 2026-27 ಅನ್ನು ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ವತಿಯಿಂದ ಆಯೋಜಿಸಲಾಗುತ್ತಿದೆ. ‘ವಲ್ರ್ಡ್ ಸ್ಕಿಲ್-2028’ ಜಾಗತಿಕ ಮಟ್ಟದ ಸ್ಪರ್ಧೆಯು ಜಪಾನಿನ ಐಚಿಯಲ್ಲಿ ನಡೆಯಲಿದ್ದು, ಭಾರತವನ್ನು ಪ್ರತಿನಿಧಿಸಲು ಬಯಸುವ ಯುವಕ ಯುತಿಯರಿಗೆ ಇಂಡಿಯಾ ಸ್ಕಿಲ್ಸ್ -2026 ಕಾರ್ಯಕ್ರಮ ರಾಜ್ಯ ಮಟ್ಟದ ವೇದಿಕೆ ಒದಗಿಸುತ್ತಿದೆ. 63 ವಿವಿಧ ವೃತ್ತಿಪರ ಕೌಶಲ್ಯ ವಿಭಾಗಗಳಲ್ಲಿ ನೈಪುಣ್ಯತೆ ಹೊಂದಿರುವ 16 ರಿಂದ 25 ವರ್ಷ ವಯೋಮಿತಿಯ ಜಿಲ್ಲೆಯ ಯುವಜನರು ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಬಹದು. ಆಸಕ್ತಿಯಿರುವ ಅಭ್ಯರ್ಥಿಗಳು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಮಾಹಿತಿಯೊಂದಿಗೆ https://www.skillindiadigital.gov.in/home ಲಿಂಕ್‍ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 15 ಕೊನೆ ದಿನವಾಗಿದೆ. ಸ್ಪರ್ಧೆಗೆ ಗುರುತಿಸಲಾಗಿರುವ 63 ವಿವಿಧ ವೃತ್ತಿಪರ ಕೌಶಲ್ಯಗಳ ಪಟ್ಟಿ, ವಯಸ್ಸಿನ ಮಾನದಂಡಗಳು ಹಾಗೂ ವಲ್ರ್ಡ್ ಮತ್ತು ಇಂಡಿಯಾ ಸ್ಕಿಲ್ಸ್ ಕರ್ನಾಟಕ-2026 ಕುರಿತಾದ ಸಂಪೂರ್ಣ ಮಾಹಿತಿಗಾಗಿ www.skillindiadigital.gov.in ಭೇಟಿ ನೀಡಬಹುದು. ನೋಂದಣಿ ಮತ್ತು ಭಾಗವಹಿಸುವಿಕೆ ಸಂಪೂರ್ಣವಾಗಿ ಉಚಿತವಾಗಿದೆ. ಹೆಚ್ಚಿನ ಮಾಹಿತಿಗೆ 9606492216 ಗೆ ಕರೆ ಮಾಡುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.









