ಸುಂಟಿಕೊಪ್ಪ ಜು.12 NEWS DESK : ಕಾರ್ಮಿಕರ ಮತ್ತು ಚಾಲಕರ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿ ಕುಶಾಲನಗರದ ಜಿ.ಕುಮಾರ್ ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪದ ದ್ವಾರಕ ಸಭಾಂಗಣದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಅಣ್ಣಾ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮಹೇಶ್ ಮಾದಪಟ್ಟಣ, ಶಿವಮ್ಮ ಸುಂದರನಗರ, ಸುಲೈಮಾನ್ ನಂಜರಾಯಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್(ಲೋಕಿ) ಸುಂಟಿಕೊಪ್ಪ, ಖಜಾಂಚಿಯಾಗಿ ಮಂಜುನಾಥ್ ಚೆನ್ಕಲ್ ನೇಮಕಗೊಂಡಿದ್ದಾರೆ.
ಸಹಕಾರ್ಯದರ್ಶಿಗಳಾಗಿ ಕೃಷ್ಣಕುಟ್ಟಿ, ನಂದಿನಿ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಸ್.ಸಂದೀಪ್, ಮಂಜುಳ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಇಬ್ರಾಹಿಂ, ರವಿ, ಸಲಂ, ಕವಿತ, ರತ್ನ, ಸುಮಾ, ಸೂರ್ಯ(ಸೂರಿ), ಆನಂದ, ಅನಿಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ವೇಳೆ ಕೊಡಗು, ಮೈಸೂರು, ಹಾಸನ ಜಿಲ್ಲೆಯ ಕಾವೇರಿ ಕೃಷಿ ಕಾರ್ಮಿಕರ ಚಾಲಕರ ಸಂಘ ಹಾಗೂ ಕಾರ್ಮಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾಗಿ ಅಣ್ಣಾ ಶರೀಫ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.









