ಕುಶಾಲನಗರ ಜು.17 NEWS DESK : ಅರಣ್ಯ ಇಲಾಖೆ ಕೈಗೊಂಡ ಕೌನ್ಸಿಲಿಂಗ್ ವರ್ಗಾವಣೆಯಲ್ಲಿ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯದಿಂದ ಆರು ಮಂದಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ.
ಉಪವಲಯ ಅರಣ್ಯ ಅಧಿಕಾರಿ ಕನ್ನಂಡ ಪಿ.ರಂಜನ್ ಅವರನ್ನು ಪುಷ್ಪಗಿರಿ ವನ್ಯಜೀವಿ ವಲಯಕ್ಕೆ, ಉಪವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜಾ ಮಾಕುಟ್ಟ ವಲಯಕ್ಕೆ, ಮಂಜುನಾಥ ಗೂಳಿ ಮಾಕುಟ್ಟ ವಲಯಕ್ಕೆ, ಗಸ್ತು ಪಾಲಕ ಹನುಮಂತ ರಾಯಪ್ಪ ಮಡಿಕೇರಿ ವನ್ಯಜೀವಿ ವಲಯಕ್ಕೆ, ಟಿ.ಕೆ.ಸಚಿನ್ ತಿತಿಮತಿ ಹಾಗೂ ಮಣಿಕಂಠ ಅವರನ್ನು ಪೊನ್ನಂಪೇಟೆ ವಲಯಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ನೂತನ ಅಧಿಕಾರಿಗಳನ್ನು ಸರಕಾರ ನೇಮಿಸಿದೆ.
ಈ ಸಂಬಂಧ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.









