ಮಡಿಕೇರಿ ಜು.18 NEWS DESK : ನೇಪಾಳದ ಪೋಕಾರದಲ್ಲಿ ಇದೇ ಜು.26ರಿಂದ 30 ರವರೆಗೆ ನಡೆಯುವ ಅಂತರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ವಿರಾಜಪೇಟೆಯ ಎಸ್‌ಎಂಎಸ್‌ಪಿ ಕಾಲೇಜ್ ನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪಾರೇರ ತ್ರಿಶಾ ಆಯ್ಕೆಯಾಗಿದ್ದಾಳೆ. ಈಕೆ ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದ ಪಾರೇರ ಯತೀಶ್ ಹಾಗೂ ದೇವಕಿ ದಂಪತಿಯ ಪುತ್ರಿ.









