ಕಾರ್ಗಿಲ್ ಯುದ್ಧ ಸ್ಮಾರಕ(ಲಡಾಕ್) ಜು.26 : ಕಾರ್ಗಿಲ್ ವಿಜಯ್ ದಿವಾಸ್ ಹಿನ್ನೆಲೆ ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.
ನಂತರ ಅಲ್ಲಿರುವ ಮ್ಯೂಸಿಯಂಗೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳು ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಬಳಸಿರುವ ಮಿಲಿಟರಿ ಉಪಕರಣಗಳು, ಭಾರತೀಯ ಸೇನೆಯ ಯುದ್ಧ ಸಲಕರಣೆಗಳು, ಹುತಾತ್ಮ ಯೋಧರ ಛಾಯಾಚಿತ್ರಗಳನ್ನು ವೀಕ್ಷಿಸಿದರು.










