ನಾಪೋಕ್ಲು ಜು.26 NEWS DESK : ಆಟೋ ಚಾಲಕರು ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚುವುದರ ಮೂಲಕ ಶ್ರಮದಾನ ಮಾಡಿ ಸರ‍್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಬಳಿ ರಸ್ತೆ ಹೊಂಡಗಳಾಗಿದ್ದು, ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯ ಗುಂಡಿಗಳಲ್ಲಿ ನಿಂತು ಕೆರೆಯಂತಾಗಿದ್ದರಿ0ದ ವಾಹನ ಚಾಲಕರು ಹಾಗೂ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿತ್ತು.
ಇದನ್ನು ಮನಗಂಡು ನಾಪೋಕ್ಲುವಿನ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆಹೊಂಡ ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು..
ಈ ಸಂದರ್ಭ ಆಟೋ ಚಾಲಕ ಸಂಘದ ಮಾಜಿ ಅಧ್ಯಕ್ಷ ರಜಾಕ್, ಆಟೋ ಚಾಲಕರಾದ ಸತೀಶ್, ಚೇತನ್ , ಕಿರಣ್, ವಿನು, ಬಿಪಿನ್, ವಿಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ರಸ್ತೆ ಹೊಂಡಗಳಿಂದ ವಾಹನ ಸಂಚಾರಕ್ಕೆ ಬಹಳ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಟೋ ಚಾಲಕರ ಶ್ರಮದಾನ ಮಾಡಿದ್ದಾರೆ. ಈ ಹಿಂದೆ ಗ್ರಾಮೀಣ ಜಲಜೀವನ್ ಮಿಷನ್ ವತಿಯಿಂದ ರಸ್ತೆಗಡ್ಡಲಾಗಿ ಪೈಪ್ ಲೈನ್ ಅಳವಡಿಸಲಾಗಿದ್ದು, ಸರ‍್ಪಕವಾಗಿ ಗುಂಡಿ ಮುಚ್ಚಿಲ್ಲ. ಸೂಕ್ತ ಚರಂಡಿಗಳಿಲ್ಲದೆ ರಸ್ತೆಯಲ್ಲಿ ಕೆಸರು ನೀರು ನಿಂತು ಚಾಲಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಿಸಿದ ಇಲಾಖೆ ಕೂಡಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು :: ನಾಪೋಕ್ಲು ಗ್ರಾ.ಪಂ ಸದಸ್ಯ ಬಿ.ಎಂ.ಪ್ರತೀಪ
ಪ್ರತಿ ವರ್ಷವೂ ಈ ರಸ್ತೆಯಲ್ಲಿ ಸಮಸ್ಯೆ ಎದುರಾಗುತ್ತದ್ದು ಎಲ್ಲಾರು ನೋಡಿಕೊಂಡು ಹೋಗ್ತಾರೆ ಹೊರತು ರಸ್ತೆ ಸರಿಪಡಿಸುವ ಗೋಜಿಗೆ ಯಾರು ಮುಂದಾಗುತ್ತಿಲ್ಲ. ಆದ್ದರಿಂದ ಕೆಲವು ಆಟೋ ಚಾಲಕರು ಮಾತ್ರ ಸೇರಿ ಸ್ವಯಂ ಪ್ರೇರಿತರವಾಗಿ ಶ್ರಮದಾನದ ಮೂಲಕ ರಸ್ತೆ ಹೊಂಡಗಳನ್ನು ಮುಚ್ಚುವ ಕರ‍್ಯ ಮಾಡಬೇಕಾಯಿತು. :: ನಾಪೋಕ್ಲು ಆಟೋ ಚಾಲಕ ಸುಗು ಕುಮಾರ್
ವರದಿ : ದುಗ್ಗಳ ಸದಾನಂದ