ಪ್ಯಾರಿಸ್ ಜು.27 NEWS DESK : ಕ್ರಾಂತಿಯ ತೊಟ್ಟಿಲು ಎಂದು ಖ್ಯಾತಿಯನ್ನು ಹೊಂದಿರುವ ಪ್ಯಾರಿಸ್ ನಗರ 33ನೇ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಯಿತು.
ಒಲಿಂಪಿಕ್ಸ್ ಗೇಮ್ ಉದ್ಘಾಟನಾ ಸಮಾರಂಭವು ‘ಪರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾಯಿತು, ಇದರಲ್ಲಿ 205 ದೇಶಗಳ ಕ್ರೀಡಾಪಟುಗಳು ಸಾಂಪ್ರದಾಯಿಕ ಸೀನ್ ನದಿಯಲ್ಲಿ ದೋಣಿಗಳಲ್ಲಿ ಪ್ರಯಾಣಿಸಿದರು. ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ ಕ್ರೀಡಾಪಟುಗಳ ಮೆರವಣಿಗೆಯು ಈ ಸಲ ಬೋಟ್ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು.
1900 ಮತ್ತು 1924 ರ ನಂತರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಮೂರನೇ ಬಾರಿ.
ಆರು ಕಿಲೋಮೀಟರ್ ಪರೇಡ್ ಆಸ್ರ‍್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು. 85 ದೋಣಿಗಳಲ್ಲಿ 205 ರಾಷ್ಟ್ರಗಳ 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಹೊತ್ತೊಯ್ದವು, ಭಾರತದಿಂದ ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಟೇಬಲ್ ಟೆನ್ನಿಸ್ ದಂತಕತೆ ಎ ಶರತ್ ಕಮಲ್ ಭಾರತದ ಧ್ವಜವನ್ನು ಹೊತ್ತು ತಂಡದ ಕ್ರೀಡಾಪಟುಗಳನ್ನು ಮುನ್ನಡೆಸಿದರು.